ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಾಲ್ಕು ವರ್ಷದಿಂದ ಶಾಲೆಗೆ ಬಾರದ ಶಿಕ್ಷಕಿ, ಮಕ್ಕಳು ಪಾಲಕರ ಪ್ರತಿಭಟನೆ

ಕುಂದಗೋಳ : ತಾಲೂಕಿನ ದೇವನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಹೆರಿಗೆ ರಜೆ ಪಡೆದು ಮರಳಿ ಕರ್ತವ್ಯಕ್ಕೆ ಹಾಜರಾಗದೇ, ಪ್ರಭಾರಿಯಾಗಿ ಮತ್ತೊಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ದೇವನೂರು ಗ್ರಾಮದ ಶಾಲೆಯ ಪರ ಸರ್ಕಾರದ ಸಂಬಳ ಪಡೆಯುತ್ತಿದ್ದಾರೆ. ಶಿಕ್ಷಕರಿಲ್ಲದೇ ದೇವನೂರು ಶಾಲೆ ಮಕ್ಕಳು ಪಾಠ ಬೋಧನೆಯಿಂದ ವಂಚಿತರಾಗಿದ್ದಾರೆ. ಕೂಡಲೇ ಶಿಕ್ಷಕರನ್ನು ಮರಳಿ ತಮ್ಮೂರ ಶಾಲೆಗೆ ನೇಮಿಸುವಂತೆ ಪಾಲಕರು ಹಾಗೂ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷೆ ಮಾಣಿಕ್ಯ ಚಿಲ್ಲೂರು ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದ ಪಾಲಕರು, ಮಕ್ಕಳು ಶೈಕ್ಷಣಿಕ ವರ್ಷ ಈಗ ತಾನೇ ಕೋವಿಡ್ ಕಳೆದು ಆರಂಭವಾಗಿದೆ. ನಮಗೆ ವಿಜ್ಞಾನ, ಗಣಿತ ಪಾಠ ಮಾಡಲು ಶಿಕ್ಷಕರಿಲ್ಲಾ ನಮ್ಮ ಶಿಕ್ಷಕರು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆ ಬಿಟ್ಟು ಬೇರೆ ಶಾಲೆಗೆ ತೆರಳಿದ್ದಾರೆ, ಕೂಡಲೇ ಶಿಕ್ಷಕರನ್ನು ಮರಳಿ ದೇವನೂರಿಗೆ ನೇಮಿಸಿ ಎಂದು ಮನವಿ ಸಲ್ಲಿಸಿದರು.

ನ.15 ಒಳಗಾಗಿ ಶಿಕ್ಷಕಿ ದೇವನೂರಿನ ಸರ್ಕಾರಿ ಶಾಲೆಗೆ ಹಾಜರಾಗದೇ ಇದ್ದಲ್ಲಿ, ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಸಹ ನೀಡಿದರು.

Edited By : Shivu K
Kshetra Samachara

Kshetra Samachara

10/11/2021 01:14 pm

Cinque Terre

27.75 K

Cinque Terre

0

ಸಂಬಂಧಿತ ಸುದ್ದಿ