ಹುಬ್ಬಳ್ಳಿ: ತಾನಾಯಿತು..ತನ್ನ ಕೃಷಿ ಆಯಿತು ಎಂದಿದ್ದ ರೈತಾಪಿ ಯುವಕ, ಇಂದು ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಕೆಜಿಎಫ್ ಚಾಪ್ಟರ್-2 ಚಿತ್ರ ನೋಡಲು ಹೋದ ಯುವಕ ಕಾಲು ತಗಿ ಎಂದಿದ್ದಕ್ಕೆ ಸೀದಾ ಮನೆಗೆ ಹೋದ ದುಷ್ಕರ್ಮಿ ಗನ್ ತೆಗದುಕೊಂಡು ಬಂದು ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಅಷ್ಟಕ್ಕೂ ಇದೆಲ್ಲ ಆಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿ.
ಹೀಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವಕ ಹೆಸರು ವಸಂತಕುಮಾರ್ ಸಣ್ಣಕಲ್ಲಪ್ಪ ಶಿವಪುರ. ಶಿಗ್ಗಾಂವ ತಾಲ್ಲೂಕಿನ ಮುಗಳಿ ಗ್ರಾಮದ ನೀವಾಸಿ. ನಿನ್ನೆ ಮಳೆಯಾಗಿದ್ದರಿಂದ ವಸಂತ್ ರಾತ್ರಿ ವೇಳೆ ಶಿಗ್ಗಾಂವ ರಾಜಶ್ರೀ ಟಾಕೀಸ್‌ಗೆ ಕೆಜಿಎಫ್ ಸಿನಿಮಾ ನೋಡಲು ಹೊಗಿದ್ದಾನೆ. ಹಿಂದೆ ಕುಳಿತ ದುಷ್ಕರ್ಮಿಯೊಬ್ಬ ಇವನು ಕುಳಿತ ಚೇರ್ ಮೇಲೆ ಕಾಲಿಟ್ಟಿದ್ದಾನೆ. ಕಾಲು ತೆಗಿಯಪ್ಪ ಎಂದು ವಸಂತ್ ಹೇಳಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೂಡಲೇ ದುಷ್ಕರ್ಮಿ ಹೊರಗೆ ಹೋಗಿ ಹತ್ತು ನಿಮಿಷದ ನಂತರ ಇನ್ನೊಬ್ಬನನ್ನು ಕರೆದುಕೊಂಡು ಬಂದು ಏಕಾಏಕಿ ವಸಂತ್ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಎರಡು ಗುಂಡುಗಳು ವಸಂತ್ ಕುಮಾರ್‌ನ ದೇಹ ಹೊಕ್ಕಿವೆ.
ಅಷ್ಟಕ್ಕೂ ಇದು ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ವಿಧಾನಸಭಾ ಕ್ಷೇತ್ರ.... ಸಿಎಂ ಬೊಮ್ಮಾಯಿ ಅವರ ಕ್ಷೇತ್ರದಲ್ಲಿಯೇ ಗುಂಡಿನ ಸದ್ದು ಕೇಳಿದ್ದು, ರಾಜ್ಯದಲ್ಲಿ ಆತಂಕವನ್ನುಂಟು ಮಾಡಿದೆ.. ಸಿಎಂ ಕ್ಷೇತ್ರದಲ್ಲಿಯೇ ಈ ರೀತಿಯಾದರೆ ಹೇಗೆ ಎಂದು ಜನರಲ್ಲಿ ಪ್ರಶ್ನೆ ಮೂಡಿದೆ... ಹೊಲದಲ್ಲಿ ಕೆಲಸ ಮಾಡಿ ಸುಸ್ತಾಗಿದ್ದ ವಸಂತ್ ಕುಮಾರ್ ತನ್ನ ಗೆಳೆಯರ ಜೊತೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ಹೋಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ವಸಂತ್ ಕುಮಾರ್‌ನನ್ನು ನಂಬಿಕೊಂಡಿರುವ ಕುಟುಂಬ ಅನಾಥವಾಗಿದೆ. ಈ ಘಟನೆ ಕುರಿತು ಪೊಲೀಸ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ವಸಂತಕುಮಾರ್‌ನಿಗೆ ನ್ಯಾಯ ಒದಗಿಸಬೇಕಿದೆ.
ಒಟ್ಟಿನಲ್ಲಿ ಇತ್ತ ಮಗ ಐಸಿಯು ದಲ್ಲಿ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾನೆ. ಅತ್ತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರದಲ್ಲಿಯೇ ಈ ಕೃತ್ಯ ನಡೆದಿದ್ದರಿಂದ ಬೊಮ್ಮಾಯಿ ಅವರು ವಸಂತ್ ಕುಟುಂಬದಕ್ಕೆ ನ್ಯಾಯ ಒದಗಿಸಿ ಕೊಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
Kshetra Samachara
20/04/2022 01:54 pm