ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈ ಕೊಟ್ಟ ಹುಬ್ಬಳ್ಳಿ ಹುಡುಗಿ, ತಲೆ ಕೆಟ್ಟ ಹುಚ್ಚ ಹುಡುಗ: ಕೊನೆಗೆ ಲವ್ವೂ ಇಲ್ಲ, ಲೈಫೂ ಇಲ್ಲ

ಹುಬ್ಬಳ್ಳಿ: ವಯಸ್ಸಿನ ಪ್ರೀತಿಗೆ ಸರಿ ಯಾವುದು? ತಪ್ಪು ಯಾವುದು ಒಂದೂ ಗೊತ್ತಾಗೋಲ್ಲ. ಅದೇ ಆ ಹುಚ್ಚುತನದ ಪ್ರೀತಿಗೆ ಕರುಣೆಯೂ ಇಲ್ಲ ಅನ್ನೋದು ಅಷ್ಟೇ ಸತ್ಯ.

ಅಂತಹ ಪ್ರೇಮ ಪ್ರಕರಣವೊಂದು ಇದೀಗ ಪ್ರೇಯಸಿಯ ಪ್ರಾಣಕ್ಕೆ ಕುತ್ತು ತಂದೊಡ್ಡಿದೆ‌. ಮನಸಾರೆ ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಮಚ್ಚಿನಿಂದ ಹಲ್ಲೆ ಮಾಡಿ ಹುಚ್ಚಾಟ ಮೆರೆದಿದ್ದಾನೆ.

ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ಯುವಕ. ಮಚ್ಚಿನೇಟಿಗೆ ನೆಲಕ್ಕೆ ಬಿದ್ದು ವಿಲವಿಲ ಒದ್ದಾಡುತ್ತಿರುವ ಯುವತಿ.

ಕಿರಾತಕ ಯುವಕನಿಂದ ಯುವತಿಯನ್ನು ರಕ್ಷಣೆ ಮಾಡುತ್ತಿರುವ ಬೈಕ್ ಸವಾರ- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿಯ ದೇಶಪಾಂಡೆ ನಗರದ ಪಂಜಾಬ್ ಬ್ಯಾಂಕ್ ಎದುರಿಗೆ ಯುವತಿಯ ಮೇಲೆ ಯುವಕನೋರ್ವ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಈ ಹಲ್ಲೆಗೆ ಕಾರಣ ಇಬ್ಬರ ನಡುವಿನ ಲವ್ ಕಹಾನಿ. ಕುಂದಗೋಳ ತಾಲೂಕಿನ ರಾಮಾಪುರ ಗ್ರಾಮದ ಇಸ್ಮಾಯಿಲ್ ಅಲಿಯಾಸ್ ಇಮ್ತಿಯಾಜ್ ಹಾಗೂ ಆಶಾ ಕಳೆದೆರಡು ವರ್ಷದಿಂದ ಚಿನ್ನ ರನ್ನ ಅಂತಾ ಪರಸ್ಪರ ಲವ್ ಮಾಡಿದ್ದಾರೆ.

ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿಹಕ್ಕಿಗಳು ಕೈ ಕೈ ಹಿಡಿದು ಪಾರ್ಕ್ , ಸಿನಿಮಾ ಅಂತಾ ಸಸ್ತಾಗುವರೆಗೆ ಸುತ್ತಾಡಿದ್ದು. ಈ ನಡುವೆ ಅದ್ಯಾವ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಬಂತೋ ಏನೋ ಗೊತ್ತಿಲ್ಲ.

ಕಳೆದ ಐದು ತಿಂಗಳಿನಿಂದ ಯುವತಿ ಆಶಾ, ಇಸ್ಮಾಯಿಲ್ ಸಂಪರ್ಕಕ್ಕೆ ಸಿಕ್ಕಿರಲೇ ಇಲ್ಲ. ದಿನನಿತ್ಯ ಅವಳಿಗೆ ಮೊಬೈಲ್ ಕಾಲ್ ಮಾಡಿ ಮಾಡಿ‌, ಮೆಸೇಜ ಮಾಡಿ ಮಾಡಿ ಬೇಸರಗೊಂಡಿದ್ದ ಇಸ್ಮಾಯಿಲ್ ಫೋನೂ ಇಲ್ಲ ಮೆಸೇಜೂ ಇಲ್ಲ ಅಂತಾ ಆಕೆಯ ಮೇಲೆ ಕ್ರೋಧಗೊಂಡಿದ್ದ.

ಇವತ್ತು ಅದೇ ಹಳೆ ಲವರ್ ಆಶಾ ನಡು ರೋಡಲ್ಲಿ ಕಂಡ ಕೂಡಲೇ ಆಕೆಯ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ಹಲ್ಲೆ ಮಾಡೋದನ್ನ ಕಂಡ ಬೈಕ್ ಸವಾರನೋರ್ವ ಯುವಕನನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೀಗೆ ಮಚ್ಚಿನಿಂದ ಹಲ್ಲೆಗೊಳಗಾಗಿರುವ ಆಶಾ ಹುಬ್ಬಳ್ಳಿಯ ಬಂಗಾರದಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ಮುಂಚೆ ಅದೇ ಬಂಗಾರದಂಗಡಿಯಲ್ಲಿ ಇಸ್ಮಾಯಿಲ್ ಅಲಿಯಾಸ್ ಇಮ್ತಿಯಾಜ್ ಕೂಡ ಕೆಲಸ ಮಾಡಿಕೊಂಡಿದ್ದ.

ಆದರೆ, ಇಸ್ಮಾಯಿಲ್ ನನ್ನು ಅಲ್ಲಿನ ಕೆಲಸದಿಂದ ತೆಗದ ಬಳಿಕ‌ ಆತ ಆಟೋ ಚಲಾಯಿಸಿಕೊಂಡು ಜೀವನ ನಡೆಸಿದ್ದ. ಇತ್ತ ಆಶಾ ಬಂಗಾರದಂಡಿಯಲ್ಲಿ ಕೆಲಸ ಮುಂದುವರೆಸಿಕೊಂಡಿದ್ದಳು.

ಇಬ್ಬರ ನಡುವೆ ಪ್ರೀತಿಯೂ ಮುಂದುವರೆದಿತ್ತು. ಆದರೆ ಈ ಪ್ರೀತಿಗೆ ಬ್ರೇಕ್ ಹಾಕಿದ್ದೇ ಕೊರೊನಾ. ಕೋವಿಡ್ ನಿಂದಾಗಿ ಇಸ್ಮಾಯಿಲ್ ಮತ್ತು ಆಶಾ ನಡುವಿನ ಸಂಪರ್ಕ ಕಡಿತಗೊಂಡಿದ್ದು, ನಿತ್ಯ ಆಶಾ ಭೇಟಿಗಾಗಿ ಇಸ್ಮಾಯಿಲ್ ಪರದಾಡಿದ್ದಾನೆ.

ಯಾವಾಗ ಆಶಾ ಇಸ್ಮಾಯಿಲ್ ನ ಸಂಪರ್ಕಕ್ಕೆ ಸಿಗದೇ ಓಡಾಡಲು ಆರಂಭಿಸಿದಳೋ. ಅಲ್ಲಿಂದ ಇಸ್ಮಾಯಿಲ್ ತಲೆಯಲ್ಲಿ ಅನುಮಾನ ಮೂಡಿದೆ. ನನ್ನ ಬಿಟ್ಟು ಬೇರೆಯವರನ್ನ ಪ್ರೀತಿ ಮಾಡುತ್ತಿದ್ದಾಳೆಂದು ಭಾವಿಸಿ, ಹಲವು ಬಾರಿ ನಿರಾಕರಣೆ ಮಾಡಿದ್ದು

ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಎಂದಿನಂತೆ ಆಶಾ ಕೆಲಸಕ್ಕೆ ತೆರಳಲು ಮನೆಯಿಂದ ಹೊರಟಿದ್ದಳು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ಇಸ್ಮಾಯಿಲ್ ದೇಶಪಾಂಡೆ ನಗರದ ಪಂಜಾಬ್ ಬ್ಯಾಂಕ್ ಮುಂದೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.‌

ಇನ್ನು ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆರೋಪಿಯನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಯುವತಿ ಆಶಾ ಕತ್ತಿನ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹುಚ್ಚು ಪ್ರೀತಿಯ ಬೆನ್ನತ್ತಿದ್ದ ಪಾಗಲ್ ಪ್ರೇಮಿ ಜೈಲುಪಾಲಾಗಿದ್ದಾನೆ.

Edited By : Manjunath H D
Kshetra Samachara

Kshetra Samachara

21/12/2020 05:20 pm

Cinque Terre

102.99 K

Cinque Terre

21

ಸಂಬಂಧಿತ ಸುದ್ದಿ