ಕಲಘಟಗಿ:ತಾಲ್ಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಗ್ರಾ ಪಂ ಚುನಾವಣೆ ಹಿನ್ನಲೆಯಲ್ಲಿ ಮನೆ ಮನೆಗೆ ಎಳ್ಳು, ಕುಂಕುಮ ಹಾಕಿ ಮಾಟ,ಮಂತ್ರ ಮಾಡಲಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.
ಗ್ರಾಮದಲ್ಲಿ ನಡೆದ ಘಟನೆಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.ಮನೆಯ ಮುಂದೆ ಬಿದ್ದ ಎಳ್ಳು,ಕುಂಕುಮ ಕಂಡ ಜನರು ದಂಗಾಗಿದ್ದಾರೆ.ಕೆಲ ಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದ್ದು,ಗ್ರಾಮಸ್ಥರು ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಮುಂದೆ ಬಿದ್ದಿರುವ ಎಳ್ಳು ಕುಂಕುಮ ಬಿದ್ದಿರುವ ವಿಡಿಯೋ ಸೆರೆಹಿಡಿದು ಜಾಲತಾಣಗಳಲ್ಲಿಬಿಡಲಾಗಿದೆ.ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ರು ಗೊಂದಲದ ವಾತಾವರಣ ತಿಳಿಗೊಳಿಸಿದ್ದಾರೆ.
Kshetra Samachara
17/12/2020 11:47 am