ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ವಾಣಿಜ್ಯ ನಗರಿಯಲ್ಲಿ ಮತ್ತೊಂದು ಕೊಲೆ

ಹುಬ್ಬಳ್ಳಿ- ಅಪರಿಚಿತ ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೆ ಒಳಗಾದ ವ್ಯಕ್ತಿಯಿಂದು ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರಿಂದ ವಾಣಿಜ್ಯ ನಗರಿಯಲ್ಲಿ ಮತ್ತೊಂದು ಕೊಲೆ ನಡೆದಿದೆ.

ಇಲಿಯಾಸ್ ಎಂಬುವವನೇ ಮೃತಪಟ್ಟಿದ್ದು, ಹುಬ್ಬಳ್ಳಿಯಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ, ಆದರೆ ಕಾರ್ಪೊರೇಷನ್ ನಿಂದ ಚೀಟಿ ತೆಗೆಯುವವರಿಂದ ಹಲ್ಲೆ ನಡೆದಿದೆ ಎಂದು ಮೃತ ಸ್ನೇಹಿತ ಆರೋಪ ಮಾಡಿದ್ದಾನೆ. ಇನ್ನೂ ಇಲಿಯಾಸ್ ಮೇಲೆ ಡಿ.11 ರಂದು ಅಪರಿಚಿತ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು.

ಪರಿಣಾಮ ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಇಂದು ಚಿಕಿತ್ಸೆ ಫಲಿಸದೇ ಇಲಿಯಾಸ್ ಮೃತಪಟ್ಟಿದ್ದಾನೆ.‌ ಈ ಕುರಿತು ಹುಬ್ಬಳ್ಳಿ ಶರಹ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Edited By :
Kshetra Samachara

Kshetra Samachara

15/12/2020 09:32 pm

Cinque Terre

99.81 K

Cinque Terre

10

ಸಂಬಂಧಿತ ಸುದ್ದಿ