ಧಾರವಾಡ: ಕಳ್ಳರು ತಮ್ಮ ಕೈಚಳಕ ತೋರಿಸಿ ದೇವಸ್ಥಾನದ ಹುಂಡಿಯಲ್ಲಿದ್ದ ಲಕ್ಷಾಂತರ ನಗದು ಎಗರಿಸಿ ಖಾಲಿ ಹುಂಡಿಯನ್ನು ಹೊರವಲಯದಲ್ಲಿ ಎಸೆದು ಹೋಗಿರುವ ಘಟನೆ ಧಾರವಾಡದ ಮದಿಹಾಳದಲ್ಲಿ ನಡೆದಿದೆ.
ಮದಿಹಾಳ ಬಡಾವಣೆಯಲ್ಲಿರುವ ವಿಠ್ಠಲ ದೇವಸ್ಥಾನದಲ್ಲಿಯೇ ಈ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಕಳ್ಳರು ದೇವಸ್ಥಾನದ ಹುಂಡಿಯನ್ನೇ ಕದ್ದೊಯ್ದು ಅದರಲ್ಲಿ ನಗದು ತೆಗೆದುಕೊಂಡು ಖಾಲಿ ಹುಂಡಿಯನ್ನು ಮದಿಹಾಳದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.
ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಶಹರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.
Kshetra Samachara
08/12/2020 06:25 pm