ಧಾರವಾಡ: ಪೊಲೀಸರ ಮೇಲೆಯೇ ಇರಾನಿ ಗ್ಯಾಂಗ್ ನವರು ಹಲ್ಲೆ ಮಾಡಿರುವ ಘಟನೆ ಧಾರವಾಡದ ಸಂಗಮ ಸರ್ಕಲ್ ಬಳಿ ನಡೆದಿದೆ.
ಬೆಂಗಳೂರು ಮೂಲದ ನಾಲ್ಕು ಜನ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಫರ್ ಇರಾಣಿ ಕಡೆಯವರನ್ನು ಹಿಡಿದು ನಿಲ್ಲಿಸಿದ್ದರು. ಆಗ, ಇರಾಣಿ ಗ್ಯಾಂಗಿನವರು ದಾಳಿ ಮಾಡಿ, ಪೊಲೀಸರನ್ನೇ ಮನ ಬಂದಂತೆ ಥಳಿಸಿದ್ದಾರೆ. ಇದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.
ಘಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಸ್ಥಳೀಯ ಶಹರ ಠಾಣೆಯ ಪೊಲೀಸರು ಬಂದ ತಕ್ಷಣವೇ ಕೆಲವರು ಪರಾರಿಯಾಗಿದ್ದು, ಓರ್ವನನ್ನು ಬಂಧನ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಜಾಫರ್ ಇರಾಣಿಯ ಮಕ್ಕಳನ್ನು ಬಂಧಿಸಲು ಬಂದಿದ್ದವರ ಮೇಲೆ ಹಲ್ಲೆ ನಡೆದಿದ್ದು, ಸಂಗಮ ವೃತ್ತದಲ್ಲಿ ಗೊಂದಲ ಸೃಷ್ಟಿಯಾಗಿತ್ತು.
ಶಹರ ಠಾಣೆಯ ಪೊಲೀಸರು, ಆಂಧ್ರ ಮೂಲದ ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಹುಡುಕುವ ಪ್ರಯತ್ನಕ್ಕೆ ಇಳಿದಿದ್ದು, ಸಿಕ್ಕಿರುವ ಒಬ್ಬಾತನಿಂದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದಾರೆ.
Kshetra Samachara
26/11/2020 03:09 pm