ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರೆದಿದ್ದು,ಒಂದೇ ದಿನ ಎರಡು ಕೊಲೆ ಪ್ರಕರಣ ನಡೆದಿದೆ.ಒಂದು ಪ್ರಕರಣ ಮಾಸುವ ಮೊದಲೇ ಮತ್ತೊಂದು ಪ್ರಕರಣ ನಡೆದಿದ್ದು ವಾಣಿಜ್ಯನಗರಿಯನ್ನು ಬೆಚ್ಚಿ ಬಿಳಿಸಿದೆ.
ಹೌದು..ಅಕ್ಕಪಕ್ಕದ ಮನೆಯಲ್ಲಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ನಗರದ ಹೊಸೂರು ವೀರ ಮಾರ್ಗದ ಪ್ರದೇಶದಲ್ಲಿ ನಡೆದಿದ್ದು, ಕೊಲೆ ಮಾಡಿದ ಮಹಿಳೆಯನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾದ ಮಹಿಳೆಯನ್ನು ಮಂಜುಳಾ ಮಣ್ಣವಡ್ಡರ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿದ ಮಹಿಳೆಯನ್ನ ಗೀತಾ ಎಂದು ಗುರುತಿಸಲಾಗಿದೆ.
ಜಗಳವಾಡುತ್ತಿದ್ದ ಸಮಯದಲ್ಲಿ ಮಂಜುಳಾ ಎಂಬುವವರನ್ನ ಕೊಲೆ ಮಾಡಿದ್ದಕ್ಕಾಗಿ ವಿದ್ಯಾನಗರ ಠಾಣೆ ಪೊಲೀಸರ ಬಂಧನ ಮಾಡಿದ್ದಾರೆ.
Kshetra Samachara
25/11/2020 07:57 pm