ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಾಡುಹಗಲೇ ಮಾಜಿ ರೌಡಿಶೀಟರ್ ಬರ್ಬರ ಹತ್ಯೆ, ಬೆಚ್ಚಿ‌ಬಿದ್ದ ವಾಣಿಜ್ಯನಗರಿ...

ಹುಬ್ಬಳ್ಳಿ: ಮಾಜಿ ರೌಡಿಶೀಟರೊಬ್ಬನನ್ನು ದುಷ್ಕರ್ಮಿಗಳು ಹಾಡುಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮರಿಪೇಟೆ ನಿವಾಸಿಯಾಗಿರುವ ರಮೇಶ ಭಾಂಡಗೆ ಎಂಬುವವರೇ ಕೊಲೆಯಾದ ಮಾಜಿ ರೌಡಿಶೀಟರ್. ತೀವ್ರವಾಗಿ ಗಾಯಗೊಂಡಿರುವ ರಮೇಶನನ್ನ ಚಿಕಿತ್ಸೆಗಾಗಿ ಕಿಮ್ಸ್ ಕರೆದುಕೊಂಡು ಹೋಗುವ ಮಾರ್ಗ ‌ಮಧ್ಯೆ ಮೃತಪಟ್ಟಿದ್ದಾನೆ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನ ತೆಗೆಯುವಲ್ಲಿ ನಿರತನಾಗಿದ್ದ ರಮೇಶ ಭಾಂಡಗೆ, ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಎನ್ನಲಾಗಿದೆ.

ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಗೊತ್ತಾಗಿಲ್ಲ. ಕೆಲ‌ಮೂಲಗಳ‌ ಪ್ರಕಾರ ಆಸ್ತಿ ವಿವಾದಕ್ಕೆ ‌ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ಮೃತ ಭಾಂಡಗೆ ಹಲವು ಅಕ್ರಮ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.‌ ಈ ಶಹರ ಠಾಣೆಯಲ್ಲಿ ದಾಖಲಾಗಲಿದ್ದು, ಪೊಲೀಸರು ಕೊಲೆ‌ ಆರೋಪಿಗಳಿಗಾಗಿ ಬಲೆ‌ಬೀಸಿದ್ದಾರೆ.

Edited By : Manjunath H D
Kshetra Samachara

Kshetra Samachara

25/11/2020 03:53 pm

Cinque Terre

105.39 K

Cinque Terre

0

ಸಂಬಂಧಿತ ಸುದ್ದಿ