ಹುಬ್ಬಳ್ಳಿ: ಹಾಡುಹಗಲೇ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ನಗರದ ಬಾಬಾಸಾನ್ ಗಲ್ಲಿಯಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ.ಬಸರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಮರಿಪೇಟೆಯ ರಮೇಶ ಭಾಂಡಗೆ ಎಂಬುವವರಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ.ರಮೇಶ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.ಕಟಿಂಗ್ ಶಾಫ್ ಗೆ ಬಂದಿದ್ದ ವೇಳೆ ಘಟನೆ ನಡೆದಿದ್ದು,ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಸ್ಥಳ ಪರಿಶೀಲನೆ ಸಿಬ್ಬಂದಿಗಳ ಜೊತೆಗೆ ವಿಷಯದ ಕುರಿತು ಮಾಹಿತಿ ಪಡೆದರು.
Kshetra Samachara
25/11/2020 03:25 pm