ಹುಬ್ಬಳ್ಳಿ: ಮನೆ ಕಳ್ಳತನ ಮಾಡುತ್ತ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಮೂವರು ಐನಾತಿ ಮನೆಗಳ್ಳರನ್ನು ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಗೋಕುಲ ರೋಡ್ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೇಮಕುಮಾರ ಭೀಮಪ್ಪ ಪೂಜಾರ,ವಿರೇಶ ಜಂಬುನಾಥ ಕಾಂಬಳೆ,ರಾಘವೇಂದ್ರ ಮಲ್ಲಪ್ಪ ಸಲಗಾರ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದನ್ನು ಅರಿತ ಚಾಲಾಕಿ ಕಳ್ಳರು ಮನೆ ಕೀಲಿ ಮುರಿದು ಮನೆಗೆ ಕನ್ನ ಹಾಕುತ್ತಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಮೂಲಕ ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.ಬಂಧಿತರಿಂದ ದ್ವಿಚಕ್ರ ವಾಹನ,ಲ್ಯಾಪ್‌ಟಾಪ್,ಟಿವಿ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
Kshetra Samachara
20/11/2020 08:01 pm