ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯೋ ಶಿವನೇ ಪೊಲೀಸರೇ ಇಸ್ಪೀಟು ಆಡ್ತಾ ಇದ್ರಂತೆ

ಧಾರವಾಡ: ಹೊಲಕ್ಕೆ ಧಕ್ಕೆ ಆಗಬಾರದು ಅಂತಾ ಬೇಲಿ ಹಾಕಲಾಗಿರುತ್ತೆ. ಆದ್ರೆ ಆ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಅದೇ ರೀತಿ ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬೇಕಾದ ಪೊಲೀಸರೇ ಅದರಲ್ಲಿ ತೊಡಗಿಕೊಂಡರೆ ಹೇಗೆ? ಇಂತದೊಂದು ಘಟನೆ ಧಾರವಾಡ ತಾಲೂಕಿನ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಬಳಿಯ ನೀಲಕಮಲ್ ಹೋಟೆಲ್ ಹತ್ತಿರದ ಉಡುಪಿ ಹೋಟೆಲ್ ಹಿಂಭಾಗದ ಕೋಣೆಯೊಂದರಲ್ಲಿ 10 ಜನ ಪೊಲೀಸರೇ ಇಸ್ಪೀಟು ಜೂಜಾಟ ಆಡುತ್ತಿದ್ದ ವೇಳೆ, ಇನ್ನೇನು ಅವರನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ. ಗರಗ ಗ್ರಾಮದ ಬಿಜೆಪಿ ಮುಖಂಡ ಅನೀಲ ಉಳವಣ್ಣವರ ಎಂಬುವವರನ್ನು ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಿಜೆಪಿ ಮುಖಂಡ ಅನೀಲ ಉಳವಣ್ಣವರ ಎಂಬುವವರೊಂದಿಗೆ ಸೇರಿಕೊಂಡು ಗರಗ ಠಾಣೆಯ ಪೊಲೀಸರೇ ಆದ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಸಶಸ್ತ್ರ ಮೀಸಲು ಪಡೆಯ ಪೊಲೀಸರಾದ ಮೈನುದ್ದೀನ್ ಮುಲ್ಲಾ, ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್.ಜಂಗನವರ, ಹುಲಿಗೆಪ್ಪ ದೊಡಮನಿ, ಮಲ್ಲಿಕಾರ್ಜುನ ಶಿರೂರ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಸೈಯದಸಾಬ್ ಇಸ್ಮಾಯಿಲ್ ಎಂಬುವವರು ಜೊತೆಗೂಡಿ ಅಂದರ್ ಬಾಹರ್ ಆಡುತ್ತಿದ್ದರು.

ಈ ಮಾಹಿತಿ ಮೇರೆಗೆ ಸ್ವತಃ ಡಿವೈಎಸ್ಪಿ ರವಿ ನಾಯಕ್ ಅವರೇ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಹತ್ತೂ ಜನ ಪೊಲೀಸರು ಪರಾರಿಯಾಗಿದ್ದಾರೆ. ಈ ವೇಳೆ 35 ಸಾವಿರ ರೂಪಾಯಿ, 1 ಮೊಬೈಲ್ ಹಾಗೂ 5 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Edited By : Nirmala Aralikatti
Kshetra Samachara

Kshetra Samachara

11/11/2020 06:08 pm

Cinque Terre

66.83 K

Cinque Terre

7

ಸಂಬಂಧಿತ ಸುದ್ದಿ