ಕುಂದಗೋಳ : ಸಾಲದ ಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದಲ್ಲಿ ನಡೆದಿದೆ.
ಹೌದು ! ಯಲಿವಾಳ ಗ್ರಾಮದ ರುದ್ರಪ್ಪಾ ಈಶ್ವರಪ್ಪ ಶೇರೆವಾಡ (48) ಎಂಬಾತನೇ ಮೃತ ದುರ್ದೈವಿಯಾಗಿದ್ದು, ಕೃಷಿ ಕೆಲಸ ಮಾಡುತ್ತಿದ್ದ ಮೃತ ರುದ್ರಪ್ಪಾ ಶಿಗ್ಗಾಂವಿಯ ಪಿನಕೇರ್ ಬ್ಯಾಂಕ್ ಹಾಗೂ ಕುಂದಗೋಳ ಪಟ್ಟಣದ ಚೈತನ್ಯಾ ಖಾಸಗಿ ಬ್ಯಾಂಕ್ ಸೇರಿ ಒಟ್ಟು 4,38,500 ಸಾಲ ಪಡೆದಿದ್ದಾನೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಬೆಳೆ ಭೂಮಿಯಲ್ಲಿ ಬರಲಾರದೆ ಬ್ಯಾಂಕ್ ಸಾಲ ಹಾಗೂ ಗ್ರಾಮದಲ್ಲಿ ಪಡೆದ ಕೈಗಡ ಸಾಲವನ್ನು ಮರಳಿ ತೀರಿಸುವುದು ಹೇಗೆ ? ಎಂದು ಮನನೊಂದು ತನ್ನ ವಾಸದ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಕಳೆದ ಶುಕ್ರವಾರ ಸಾವನ್ನಪ್ಪಿದ್ದಾನೆ. ಈ ಘಟನೆ ಕುರಿತಂತೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/06/2022 03:48 pm