ನವಲಗುಂದ : ತಾಲ್ಲೂಕಿನ ಆಯಟ್ಟಿ ಗ್ರಾಮದ ರೈತನೊಬ್ಬ ಬೆಳೆ ಹಾನಿಗೆ ಮನನೊಂದು ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೌದು ಆತ್ಮಹತ್ಯೆಗೆ ಶರಣಾದ ರೈತನನ್ನು 24 ವಯಸ್ಸಿನ ಭೀಮಪ್ಪ ನಾಗಪ್ಪ ನಾಯ್ಕರ ಎಂದು ಗುರುತಿಸಲಾಗಿದ್ದು, ಕಳೆದ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನು ವ್ಯಕ್ತಿ ಸ್ವಂತ 2 ಎಕರೆ ಜಮೀನು ಹೊಂದಿದ್ದು, 12 ಎಕರೆ ಜಮೀನು ಲಾವಣಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಯಾದ ಹಿನ್ನೆಲೆ ಮಾಡಿದ ಸಾಲ ತೀರಿಸಲಾಗದೆ ಮನನೊಂದು ತನ್ನ ಸ್ವಂತ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
Kshetra Samachara
17/12/2021 06:37 pm