ಧಾರವಾಡ: ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡದ ಹೊರವಲಯದ ಬೆಳಗಾವಿ ರಸ್ತೆಯಲ್ಲಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟೂರು ಕ್ರಾಸ್ ಬಳಿ ನಡೆದಿದೆ.
ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಬಾಹುಬಲಿ ಪ್ರಕಾಶ ಹನಬರಟ್ಟಿ ಮೃತ ದುರ್ದೈವಿ. ಬಾಹುಬಲಿ ಅವರು ಮೂಲತಃ ಬೈಲಹೊಂಗಲ ತಾಲೂಕಿನ ನಿವಾಸಿಯಾಗಿದ್ದು ಕಲ್ಲಾಪುರದಲ್ಲಿ ಇದ್ದರು. ಬೆಲೂರಿನಲ್ಲಿರುವ ಆರ್‌ಎಸ್‌ಬಿ ಕಾರ್ಖಾನೆಯ ಉದ್ಯೋಗಿಯಾಗಿದ್ದರು. ಎಂದಿನಂತೆ ಇಂದು ಕೆಲಸಕ್ಕೆಂದು ಹೊರಟಿದ್ದರು. ಮನೆಯಿಂದ ಬೈಕ್ ಮೇಲೆ ಹೊರಟಿದ್ದ ಬಾಹುಬಲಿ ಅವರಿಗೆ ಹೆದ್ದಾರಿಯಲ್ಲಿ ಟಿಪ್ಪರ್ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹೆದ್ದಾರಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ಅನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.
Kshetra Samachara
01/03/2021 09:41 am