ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಿಫ್ಟ್‌ ಕೇಳಿ ಪ್ರಾಣ ತೆತ್ತ ವೃದ್ಧೆ- ಸವಾರ ಎಸ್ಕೇಪ್

ಹುಬ್ಬಳ್ಳಿ: ಅಪರಿಚಿತ ಸವಾರನಿಗೆ ಕೈ ಮಾಡಿ ಲಿಫ್ಟ್‌ ಕೇಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಬೈಕ್‌ನಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಹಳ್ಯಾಳ ಮಾರ್ಗದಲ್ಲಿ ನಡೆದಿದೆ.

ಹಳ್ಯಾಳ ಗ್ರಾಮದ ಶಾಂತವ್ವ ಗದಿಗೆಪ್ಪ ಮಡಿವಾಳರ ಮೃತ ದುರ್ದೈವಿ. ಶಾಂತವ್ವ ಅವರು ಎಂದಿನಂತೆ ತರಕಾರಿ ಮಾರಾಟ ಮಾಡಲು ಮಂಗಳವಾರ ಹುಬ್ಬಳ್ಳಿಗೆ ತೆರಳುತ್ತಿದ್ದರು. ಆದರೆ ಮಾರ್ಗ ಮಧ್ಯೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಘಟನೆಯಿಂದ ಆತಂಕಕ್ಕೆ ಒಳಗಾದ ಬೈಕ್ ಸವಾರ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Edited By : Vijay Kumar
Kshetra Samachara

Kshetra Samachara

24/02/2021 10:02 am

Cinque Terre

61.57 K

Cinque Terre

3

ಸಂಬಂಧಿತ ಸುದ್ದಿ