ಧಾರವಾಡ: ದಿನೇ ದಿನೇ ಐಪಿಎಲ್ ಬೆಟ್ಟಿಂಗ್ ಜೋರಾಗಿ ನಡೆಯುತ್ತಲೇ ಇದೆ. ಪೊಲೀಸರು ಅಲ್ಲಲ್ಲಿ ಐಪಿಎಲ್ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟುತ್ತಿದ್ದರೂ ವ್ಯಾಪಕವಾಗಿ ಈ ಬೆಟ್ಟಿಂಗ್ ನಡೆಯುತ್ತಲೇ ಇದೆ. ನಿನ್ನೆ ತಡರಾತ್ರಿಯಷ್ಟೇ ಇಬ್ಬರು ಬೆಟ್ಟಿಂಗ್ ಕುಳಗಳನ್ನು ಬಂಧಿಸಿದ್ದ ಪೊಲೀಸರು ಇಂದು ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಮಾಳಾಪುರದ ರಿಯಾಜಖಾನ್ ರೌಫಖಾನ್ ಹಾಗೂ ಅಲ್ಲಾಭಕ್ಷ ನವಲೂರ ಎಂಬವರೇ ಬಂಧಿತ ಆರೋಪಿಗಳು. ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದನ್ನು ಖಚಿತಪಡಿಸಿಕೊಂಡ ಧಾರವಾಡ ಉಪನಗರ ಠಾಣೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಂದ 25 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.
Kshetra Samachara
04/11/2020 05:13 pm