ಧಾರವಾಡ: ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಳಾಪುರದ ಲತೀಫ್ ತಂಬೋಲಿ ಹಾಗೂ ರಸಲಾಪುರದ ಓಣಿಯ ಇಜಾಜ್ ಅಹ್ಮದ್ ಮನಿಯಾರ್ ಎಂಬುವವರೇ ಬಂಧಿತ ಆರೋಪಿಗಳು.
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಿಸಿದಂತೆ ಇವರು ಬೆಟ್ಟಿಂಗ್ ಆಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪನಗರ ಠಾಣೆ ಪೊಲೀಸರು ಈ ಇಬ್ಬರನ್ನೂ ಬಂಧಿಸಿ ಅವರಿಂದ 15,200 ನಗದು ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
04/11/2020 10:37 am