ಹುಬ್ಬಳ್ಳಿ- ಎಲ್ಲ ರೀತಿಯ ಅಪರಾಧ ಕೃತ್ಯಗಳನ್ನು ಮಟ್ಟ್ ಹಾಕಲು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಅವಳಿ ನಗರದ ನೂತನ ಪೊಲೀಸ್ ಆಯುಕ್ತ ಲಭೂರಾಮ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಅವಳಿನಗರದಲ್ಲಿ ಮಟ್ಕಾ ದಂಧೆ ಬುಕ್ಕಿಗಳು, ಬಡ್ಡಿ ವಸೂಲಿ ಕುಳಗಳು, ಅಟ್ಟಹಾಸ ಮೆರೆಯುವ ಪುಂಡರು, ಗಾಂಜಾ ಮತ್ತಿತರ ದಂಧೆಕೋರರ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದಿದ್ದಾರೆ.
ಅವಳಿನಗರದ ಜನತೆ ಶಾಂತಿಪ್ರಿಯರಾಗಿದ್ದಾರೆ. ಇಲ್ಲಿನ ಕಾನೂನು-ಸುವ್ಯವಸ್ಥೆ ಕೆಡದಂತೆ ಇಲಾಖೆ ಕೆಲಸ ಮಾಡಲಿದೆ. ಬೆಂಗಳೂರು ನಗರದ ಹೊರತಾಗಿ ರಾಜ್ಯದಲ್ಲಿನ ದೊಡ್ಡ್ ನಗರ ಅವಳಿನಗರವಾಗಿದೆ. ಹಲವು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಮಟ್ಕಾ ದಂಧೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಗಳನ್ನು ಇಲ್ಲವಾಗಿಸಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಎಲ್ಲ ಹಿರಿ-ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು. ಎಲ್ಲ ಠಾಣೆಗಳಿಗೆ ಭೇಟಿ ನೀಡಿ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ನಮ್ಮ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಹಾಗೂ ಬಡ್ಡಿ ದಂಧೆ ನಡೆಸುವ ಕುಳಗಳ ಉಪಟಳ ಕಂಡು ಬಂದಲ್ಲಿ ಹೆಡೆಮುರಿ ಕಟ್ಟಲಾಗುವುದು. ಜೊತೆಗೆ ಕಮಿಶ್ನರೇಟ್ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಗಳಲ್ಲಿ ಬಾಕಿ ಇರುವ ಎಲ್ಲ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಆರೊಪಿಗಳ ಪತ್ತೆ ಮಾಡಲಾಗುವುದು ಎಂದು ಆಯುಕ್ತ ಲಾಭೂ ರಾಮ್ ಹೇಳಿದ್ದಾರೆ.
ರಾಜಸ್ಥಾನ ಮೂಲದವರಾದ ಲಭೂರಾಮ್ ೨೦೦೪ ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
Kshetra Samachara
24/10/2020 02:26 pm