ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯಲ್ಲೂ ಗಾಂಜಾ ಘಾಟು ವ್ಯಾಪಕವಾಗಿದ್ದು, ಬೆಂಗಳೂರಿನಿಂದ ನಿಯಮಿತವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್‌ವೊಂದರಿಂದ ಅನೇಕರಿಗೆ ನಿಯಮಿತವಾಗಿ ಸರಬರಾಜಾಗುತ್ತಿದೆ ಎನ್ನಲಾಗಿದೆ.
ಇತ್ತೀಚಿಗೆ ವಾಣಿಜ್ಯ ನಗರಿಯಲ್ಲಿ ಗಾಂಜಾ ಮಾರುತ್ತಿದ್ದವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಅದರಲ್ಲಿ ಕೆಲ ಜನರು ನಶೆ ಗ್ಯಾಂಗ್ ಜತೆ ನಿರಂತರ ಸಂಪರ್ಕ ದಲ್ಲಿದ್ದಾರೆನ್ನಲಾಗಿದೆ.
ಬೆಂಗಳೂರುನಿಂದ ಗಾಂಜಾ ಕಳಸುತ್ತಿದ್ದ ಧಾರವಾಡ ಮೂಲದ ಒಬ್ಬರು ತಲುಪಿಸುತ್ತಿದ್ದು 50 ಕ್ಕೂ ಹೆಚ್ಚು ಖಾಯಂ ಗಿರಾಕಿಗಳು ಇದ್ದಾರೆನ್ನಲಾಗಿದೆ.
ಬೆಂಗಳೂರುನಿಂದ ಕಳುಹಿಸುತ್ತಿದ್ದ ಎಲ್ ಎಸ್‌ಡಿಎಂಡಿ , ಕೊಕೇನ್ ಹಾಗೂ ಇತರ ಗಾಂಜಾಗಳನ್ನು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಖಾಯಂ ಗಿರಾಕಿಗಳು ಸೇರಿಕೊಂಡು ವರೂರ ಬಳಿಯ ಐಷಾರಾಮಿ ಹೋಟೆಲ್ ಆಗಾಗ ಗಮ್ಮತ್ತಿನ ಪಾರ್ಟಿಗಳು ನಡೆಸುವುದು ಮಾಮೂಲಾಗಿದೆ ಎನ್ನಲಾಗಿದೆ.
ಈಗಾಗಲೇ ಹಿಡಿದ ಕೆಲ ಗಾಂಜಾ ಆರೋಪಿಗಳನ್ನು ಪುನಃ ಹಿಡಿದು, ಡ್ರಿಲ್ ಮಾಡಿದಲ್ಲಿ ದೊಡ್ಡ ದೊಡ್ಡ ಕುಳಗಳ ಜಾತಕ ಹೊರಬರುವುದರಲ್ಲಿ ಸಂಶಯವೇ ಇಲ್ಲ. ಅಷ್ಟಕ್ಕೂ ಈ ಗಾಂಜಾ ಜಾಲವನ್ನು ಪೊಲೀಸರು ಆದಷ್ಟು ಬೇಗ ನೆಲಸಮ ಮಾಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Kshetra Samachara
16/10/2020 10:36 am