ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಗ್ಗಿಲ್ಲದೇ ನಡೆಯುತ್ತಿದೆ ಸಿಗರೇಟ್ ಮಾಫಿಯಾ! ಗಲ್ಲಿ ಗಲ್ಲಿಗಳಲ್ಲಿ ವಿದೇಶಿ ಸಿಗರೇಟ್ ಘಾಟು

ಹುಬ್ಬಳ್ಳಿ- ಪ್ರಖ್ಯಾತಿ-ಕುಖ್ಯಾತಿಗಳೆರಡನ್ನು ಸಮಾನವಾಗಿ ಸರಿದೂಗಿಸಿಕೊಂಡು ಶ್ರೇಣಿಕೃತ ಹಂತದಲ್ಲಿ ಸಾಗುತ್ತಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿದೇಶಿ ಸಿಗರೇಟ್ ಮಾರಾಟಕ್ಕೆ ಅಂಕುಶವಿಲ್ಲದಂತಾಗಿದೆ.

ಪರಿಣಾಮ ಗಲ್ಲಿ, ಗಲ್ಲಿಗಳಲ್ಲಿ ಹಾಗೂ ಗೂಡ ಅಂಗಡಿಗಳಲ್ಲಿ ವಿದೇಶಿ ಸಿಗರೇಟ್ ಮಾರಾಟ ಹಾಗೂ ಸೇವನೆ ಪ್ರಕ್ರಿಯೆ ಎಗ್ಗಿಲ್ಲದೆ ಸಾಗಿದೆ. ಕಡಿವಾಣ ಮಾತ್ರ ಮರೀಚಿಕೆಯಾಗಿದೆ.

ಅವಳಿ ನಗರದಲ್ಲಿ ಗಾಂಜಾ ಮಾರಾಟಗಾರರ ಬಂಧನದ ಪ್ರಕರಣ ವಾರಕ್ಕೆ ಕನಿಷ್ಠ ಒಂದಾದರೂ ದಾಖಲಾಗುತ್ತಿದೆ.

ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ವಿದೇಶಿ ಸಿಗರೇಟ್ ಹಾಗೂ ಗಾಂಜಾ ಮಾರಾಟ ಪ್ರಕ್ರಿಯೆಗೆ ಕಡಿವಾಣ ಹಾಕಲು ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ...

ವಿದ್ಯಾಕಾಶಿ ಖ್ಯಾತಿಯ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗ ಸಂಸ್ಥೆಗಳ ಉದ್ಯೋಗಿಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಗಾಂಜಾ ಹಾಗೂ ವಿದೇಶಿ ಸಿಗರೇಟ್ ಮಾರಾಟ ಜಾಲದ ಆಳ-ಅಗಲ ಪೊಲೀಸ್ ಇಲಾಖೆಗೆ ತಿಳಿಯದ ಸಂಗತಿಯೇನಲ್ಲ.

ಪೊಲೀಸರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ವಿದೇಶಿ ಸಿಗರೇಟ್ ದಂಧೆ ಅವಳಿ ನಗರದಲ್ಲಿ ನಡೆಯುತ್ತಲೇ ಇದೆ. ಅಲ್ಲದೇ ಸಾಮಾನ್ಯ ಸಿಗರೇಟಗಳಿಗಿಂತ ವಿದೇಶಿ ಸಿಗರೇಟಗಳಲ್ಲಿ ನಿಕೋಟಿನ್ ಪ್ರಮಾಣ ಜಾಸ್ತಿಯಿದ್ದು, ಮಾನವನ ದೇಹಕ್ಕೆ ಹಾನಿಕಾರಕವಾದ ಕೆಮಿಕಲ್ ಕೂಡ ಇಲ್ಲಿ ಬಳಸಿ ತಯಾರಿಸಿರುವ ಸಿಗರೇಟಗೆ ಧೂಮಪಾನ ಪ್ರಿಯರು ಮುಗಿಬಿದ್ದು ಖರೀದಿಸುತ್ತಾರೆ.

ಭಾರತೀಯ ಮಾದರಿಯನ್ನು ಹೋಲುವ ವಿದೇಶಿ ಸಿಗರೇಟಗಳು ಸಂಪೂರ್ಣ ಭಾರತೀಯ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಭಾರತೀಯ ಸುಂಕ ಹಾಗೂ ತೆರಿಗೆ ವಂಚನೆಗೆ ಕಂಡುಕೊಂಡಿರುವ ವಾಮ ಮಾರ್ಗವಾಗಿದೆ ಎಂದು ಕೂಡ ಹೇಳಬಹುದು.

ಡಿಜೆ ಅರಮ್ ಬ್ಲಾಕ್ ಹಾಗೂ ಗುಡಾಂಗ್ ಗರಮಗಳಂತ ಸಿಗರೇಟ್ ಧೂಮಪಾನ ಪ್ರಿಯರನ್ನು ತನ್ನ ದಾಸರನ್ನಾಗಿಸಿಕೊಂಡಿದೆ. ಅಲ್ಲದೇ ಈ ಮಾಫಿಯಾದ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿದೇಶಿ ಸಿಗರೇಟಗಳೇ ಹೀಗೆ ರಾಜಾರೋಷವಾಗಿ ಭಾರತಕ್ಕೆ ಆಗಮಿಸುತ್ತಿದ್ದು ಶಸ್ತ್ರಾಸ್ತ್ರಗಳು ಆಗಮಿಸುವುದು ದೊಡ್ಡ ವಿಷಯವೇನಲ್ಲ.....!

Edited By :
Kshetra Samachara

Kshetra Samachara

13/10/2020 08:39 pm

Cinque Terre

62.26 K

Cinque Terre

12

ಸಂಬಂಧಿತ ಸುದ್ದಿ