ಕಲಘಟಗಿ: ಕಲಘಟಗಿ-ತಡಸ ಸಂಪರ್ಕ ರಸ್ತೆಯ ತಬಕದಹೊನ್ನಳ್ಳಿ ಗ್ರಾಮದ ಸಮೀಪ ಮಂಗಳವಾರ ಬೆಳಗಿನ ಜಾವ ನೀಲಗಿರಿಯ ನಾಟಾ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಲಘಟಗಿ- ತಡಸ ರಸ್ತೆ ತಗ್ಗು ಗುಂಡಿ ಬಿದ್ದು ಹಾಳಾಗಿದ್ದು, ರಸ್ತೆಯಲ್ಲಿನ ಗುಂಡಿಯಿಂದಾಗಿ ಚಾಲಕ ನಿಯಂತ್ರಣದ ತಪ್ಪಿದ ಲಾರಿ ಪಲ್ಟಿ ಹೊಡೆದಿದೆ. ತಕ್ಷಣವೇ ಚಾಲಕ ಪರಾಗಿದ್ದಾನೆ. ಅಪಘಾತ ಸಂಭವಿಸಿದ ಪರಿಣಾಮ ಕೆಲ ಹೊತ್ತು ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು.
Kshetra Samachara
13/10/2020 11:42 am