ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಬ್ಯಾಗುಗಳನ್ನ ಕದಿಯುತ್ತಿದ್ದ ಚೋರನನ್ನ ಹಿಡಿಯುವಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೇ ಯಶಸ್ವಿಯಾಗಿದ್ದು, ಉಪನಗರ ಠಾಣೆ ಪೊಲೀಸರಿಗೆ ಆರೋಪಿಯನ್ನ ಹಿಡಿದು ಕೊಟ್ಟಿದ್ದಾರೆ.
ದೂರದ ಪ್ರಯಾಣ ಮುಗಿಸಿ ಬಂದು ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದ ತಕ್ಷಣವೇ, ಒಳಗೆ ಹೋಗುತ್ತಿದ್ದ ವೀರೇಶ ಎಂಬಾತ ಚೆನ್ನಾಗಿ ಕಾಣುವ ಬ್ಯಾಗುಗಳನ್ನ ಎಗರಿಸಿ ಪರಾರಿಯಾಗುತ್ತಿದ್ದ. ಇಂದು ಕೂಡಾ ಹಾಗೆಯೇ ಮಾಡುತ್ತಿದ್ದಾಗ ಬಸ್ ಚಾಲಕ ಆರೋಪಿಯನ್ನ ಹಿಡಿದಿದ್ದಾನೆ. ಚನ್ನಮ್ಮ ವೃತ್ತದಲ್ಲಿ ನಿಂತಿದ್ದ ಪೊಲೀಸರಿಗೆ ಆರೋಪಿಯನ್ನ ಹಿಡಿದು ಕೊಟ್ಟಿದ್ದು, ಪೊಲೀಸರು ಆರೋಪಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
12/10/2020 05:25 pm