ಧಾರವಾಡ: ತನ್ನ ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪತ್ನಿ ತನ್ನ ಗಂಡನ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಹಣಕ್ಕಾಗಿ ದೈಹಿಕ, ಮಾನಸಿಕ ಹಿಂಸೆಯ ಜೊತೆಗೆ ಹತ್ಯೆಗೂ ತನ್ನ ಪತಿ ಯತ್ನಿಸಿದ್ದಾರೆ ಎಂದು ಧಾರವಾಡ ಹೈಕೋರ್ಟ್‌ನಲ್ಲಿ ಎಸ್‌ಡಿಎ ಕೆಲಸದಲ್ಲಿರುವ ಪತ್ನಿ ಧಾರವಾಡದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಮೂಲತಃ ಬಾಗಲಕೋಟೆಯ ಬೇವೂರಿನ ಜಯಶ್ರೀ ಚಿಂಚರಕಿಮಠ (35) ಎಂಬುವವರೇ ವಿಜಯಪುರದ ಬಸವನಬಾಗೇವಾಡಿಯ ಸಾಸನೂರಿನ ತಮ್ಮ ಪತಿ ದಯಾನಂದ ಚಿಂಚರಕಿಮಠ ವಿರುದ್ಧ ದೂರು ದಾಖಲಿಸಿದ್ದಾರೆ.
2008 ಫೆ.28 ರಂದು ಸಾಸನೂರಿನ ಮಡಿವಾಳೇಶ್ವರ ಮಠದಲ್ಲಿ ನಡೆದ ಮದುವೆ ವೇಳೆ ವರದಕ್ಷಿಣೆಯಾಗಿ 4 ಲಕ್ಷ ನಗದು, 4 ತೊಲೆ ಬಂಗಾರ ಸೇರಿದಂತೆ ಇನ್ನಿತರ ಗೃಹೋಪಯೋಗಿ ವಸ್ತುಗಳನ್ನು ನೀಡಲಾಗಿತ್ತು.
ಇದಾದ ಬಳಿಕ 2009 ರಲ್ಲಿ ಎಸ್‌ಡಿಎಯಾಗಿ ಹೈಕೋರ್ಟ್‌ನಲ್ಲಿ ಕೆಲಸ ಲಭಿಸಿದ್ದು, ಈ ಕೆಲಸ ನಿರ್ವಹಣೆಯೊಂದಿಗೆ ಹೈಕೋರ್ಟ್ ಕ್ವಾಟರ್ಸ್‌ನಲ್ಲಿ ನೆಲೆಸಿದ್ದಾರೆ.
ಈಗ 3 ಜನ ಹೆಣ್ಣು ಮಕ್ಕಳು ಇದ್ದು, ಗಂಡ ಸಹ ತಮ್ಮ ಕೆಲಸ ಬಿಟ್ಟು ನನ್ನೊಂದಿಗೆ ನೆಲೆಸುವುದರ ಜೊತೆಗೆ ಹಣಕ್ಕಾಗಿ ಹಿಂಸೆ ಕೊಡುತ್ತಿದ್ದಾರೆ.
ಈ ಕಾರಣದಿಂದ ಮತ್ತೆ 2 ಲಕ್ಷ ಹಣ ನೀಡಿದ್ದೇನೆ. ಈಗ ಕೆಲ ದಿನಗಳ ಹಿಂದೆ ನನ್ನ ಎಟಿಎಂ ಸಹ ಕಿತ್ತುಕೊಂಡು ಬೆಂಗಳೂರಿಗೆ ಹೋಗಿ ಒಂದು ವಾರ ಅಲ್ಲಿಯೇ ಉಳಿದಿದ್ದ ಅವರು, ಅ.4 ರಂದು ರಾತ್ರಿ ಏಕಾಏಕಿ ಮನೆಗೆ ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಲು ಪಯತ್ನಿಸಿದ್ದಾರೆ.
ದೈಹಿಕ ಹಾಗೂ ಮಾನಸಿಕವಾಗಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಯಶ್ರೀ ದೂರಿದ್ದಾರೆ.
Kshetra Samachara
10/10/2020 06:51 pm