ಹುಬ್ಬಳ್ಳಿ: ಅದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಟೋರಿಯಸ್ ಮರ್ಡರ್ ಕೇಸ್. ರಿಯಲ್ ಎಸ್ಟೇಟ್ ಉದ್ಯಮಿ ರೌಡಿ ಶೀಟರ್ ನನ್ನು ಸಿನಿಮೀಯ ಸ್ಟೈಲ್ ನಲ್ಲಿ ಶೂಟೌಟ್ ಮಾಡಲಾಗಿತ್ತು. ಹೀಗಾಗಿ ಮೊದಲೆಲ್ಲಾ ಎಲ್ಲಾ ಆರೋಪಿಗಳು ಹಾಗೂ ಕೃತ್ಯ ಬಳಸಿದ ಪಿಸ್ತೂಲ್ ಗಳನ್ನ ಸೀಜ್ ಮಾಡಿದ್ದೇವೆ ಎಂದಿದ್ದ, ಖಾಕಿ ಮತ್ತೆ ರಾಜಕಾಲುವೆಯಲ್ಲಿ ಫಿಸ್ತೂಲ್ ಗಾಗಿ ಹುಡುಕಾಟ ನಡೆಸಿದ್ದು, ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಒಂದು ದೃಶ್ಯ ಸಾಕ್ಷಿ ಹೇಳುತ್ತಿದೆ. ಪೊಲೀಸರು ಇಲ್ಲಿಯವರೆಗೆ ಹೇಳಿದ ನೂರು ಕಥೆಗಳಿಗೆ....ಯಾಕೆಂದ್ರೆ ಆಗಸ್ಟ್ 06ರಂದು ಹಳೇ ಹುಬ್ಬಳ್ಳಿಯ ಅಲ್ ತಾಜ್ ಹೋಟೆಲ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಮೃತ ಪಟ್ಟಿದ್ದ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಕೇಸ್ ನ ಕಥೆಯಿದು. ಇಷ್ಟು ದಿನ ಹುಬ್ಬಳ್ಳಿಯ ಖಾಕಿ ಟೀಮ್ ನಾವು ಕೃತ್ಯಕ್ಕೆ ಬಳಸಿದ ಎಲ್ಲಾ ಪಿಸ್ತೂಲ್ ಗಳು ಹಾಗೂ 11 ಜನ ಆರೋಪಿಗಳನ್ನ ಬಂಧಿಸಿದ್ದೇವೆ ಎಂದಿತ್ತು. ಅದಲ್ಲದೇ ಕಳೆದ ವಾರ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಶಿಷ್ಯ ಬಚ್ಚಾಖಾನ್ ನನ್ನ ಕೂಡಾ ಕರೆತಂದು ವಿಚಾರಣೆ ಮಾಡಿದ್ದರು. ಅಲ್ಲಿಗೆ ಕೇಸ್ ಒಂದು ಹಂತಕ್ಕೆ ಬಂದಿದೆ ಅಂತಾನೆ ಎಲ್ಲರೂ ಭಾವಿಸಿದ್ದರು. ಆದರೆ ಕೇಸ್ ಸದ್ಯ ಬಿಗ್ ಟ್ವಿಸ್ಟ್ ಸಿಕ್ಕಿದೆ.ಇನ್ನೂ ಕೊಲೆಗೆ ಬಳಿಸಿದ ಪಿಸ್ತೂಲ್ ಪೊಲೀಸರ ಕೈಗೆ ಸಿಕ್ಕಲ್ವಾ ಎನ್ನೋ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಕಳೆದೆರಡು ದಿನಗಳಿಂದ ಹುಬ್ಬಳ್ಳಿಯ ದೇಶಪಾಂಡೆ ನಗರದ ಬಳಿಯ ರಾಜಕಾಲುವೆಯಲ್ಲಿ ಫಿಸ್ತೂಲ್ ಗಾಗಿ ಹುಡುಕಾಟ ನಡೆಸಲಾಗಿದೆ.
Kshetra Samachara
08/10/2020 08:17 pm