ಹುಬ್ಬಳ್ಳಿ: ವರನಟ ಡಾ. ರಾಜ್‌ಕುಮಾರ್ ಅವರ ಅಳಿಯ ನಟ ರಾಮ್‌ಕುಮಾರ್ 90ರ ದಶಕದಲ್ಲಿ ಯುವಜನರಿಗೆ ಇಷ್ಟವಾಗುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ಯುವಜನರ ಹೃದಯಗಳಿಗೆ ಲಗ್ಗೆ ಇಟ್ಟಿದ್ದರು. ಈಗ ರಾಮ್‌ಕುಮಾರ್ ಪುತ್ರ ಧೀರೆನ್ ರಾಮ್‌ಕುಮಾರ್ ಚಂದನವನಕ್ಕೆ ಪ್ರವೇಶ ಪಡೆದಿದ್ದಾರೆ.
ಹೌದು..'ಶಿವ 143' ಚಿತ್ರದ ಮೂಲಕ ಧೀರೆನ್ ಅವರು ಬೆಳ್ಳಿ ತೆರೆಯಲ್ಲಿ ಮಿಂಚಲು ತಯಾರಾಗಿದ್ದರು. ಪಕ್ಕಾ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಇರುವ ವಿಭಿನ್ನ ಲವ್ ಸ್ಟೋರಿಯ ಚಿತ್ರ ಇದಾಗಿದೆ ಎಂದು ಸ್ವತಃ ಧೀರೆನ್ ಹೇಳ್ತಾರೆ. ಇವತ್ತು ಹುಬ್ಬಳ್ಳಿಯಲ್ಲಿ ಚಿತ್ರದ ಪ್ರಮೋಷನ್ ಜಾಥಾ ನಡೆಸಲಾಗಿದೆ. ಹುಬ್ಬಳ್ಳಿ ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಜೊತೆಗೆ ಚಿತ್ರ ರಿಲೀಸ್ ಆದ ನಂತರವೂ ಜನ ಕೈ ಹಿಡಿಯುತ್ತಾರೆ ಎಂಬ ನಿರೀಕ್ಷೆಯಲ್ಲಿ ನಟ ಧೀರೆನ್ ರಾಮ್‌ಕುಮಾರ್ ಇದ್ದಾರೆ. ಹುಬ್ಬಳ್ಳಿಗೆ ಬಂದಿದ್ದ ನಟ ಧೀರೆನ್ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತಾಡಿದ್ದಾರೆ. ಆ ಕಿರು ಸಂದರ್ಶನ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/08/2022 09:57 pm