ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮದುವೆ ಮನೆಯಂತೆ ಶೃಂಗಾರಗೊಂಡ ಥಿಯೇಟರ್: ಜೇಮ್ಸ್ ಆಗಮನಕ್ಕೆ ಸಂಭ್ರಮಾಚರಣೆ

ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಿತ್ರಮಂದಿರಗಳನ್ನು ಮದುವೆಯ ಮನೆಗಳಂತೆ ಅಲಂಕಾರ ಮಾಡಲಾಗಿದೆ.

ಹೌದು, ದಿ‌.ಪುನೀತ್ ಅವರ ಜನ್ಮದಿನದ ಅಂಗವಾಗಿ ಬಿಡುಗಡೆಯಾಗುತ್ತಿರುವ ಜೇಮ್ಸ್ ಚಿತ್ರಕ್ಕೆ ವಾಣಿಜ್ಯನಗರಿ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲೆಡೆಯೂ ಸಂಭ್ರಮಾಚರಣೆ ಮಾಡಲಾಗುತ್ತಿದ್ದು, ಹುಬ್ಬಳ್ಳಿಯಲ್ಲಿ ಚಿತ್ರಮಂದಿರಗಳಿಗೆ ಪ್ಲೇಕ್ಸ್ ಬ್ಯಾನರ್ ಮೂಲಕ ಅದ್ದೂರಿಯಾಗಿ ಶೃಂಗರಿಸಲಾಗಿದೆ.

ಇನ್ನೂ ಅಪ್ಸರಾ ಚಿತ್ರಮಂದಿರದಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ ಅಪ್ಪು ಅಭಿಮಾನಿಗಳು ಹಾಗೂ ಸಿನಿಪ್ರೀಯರು ಆಗಮಿಸಿದ್ದು, ಚಿತ್ರವನ್ನು ವಿಜೃಂಭಣೆಯಿಂದ ಸ್ವಾಗತಿಸಿದರು.

Edited By : Shivu K
Kshetra Samachara

Kshetra Samachara

17/03/2022 02:15 pm

Cinque Terre

21.1 K

Cinque Terre

1

ಸಂಬಂಧಿತ ಸುದ್ದಿ