ಹುಬ್ಬಳ್ಳಿ: ಹಣ ಸೇರಿದಂತೆ ಇತರೆ ದಾನಗಳನ್ನು ನೀಡುವುದಕ್ಕಿಂತ ಬಡವರು, ನೊಂದವರಿಗೆ ಜೀವನ ಕಟ್ಟಿಕೊಳ್ಳಲು ಅವಕಾಶಗಳ ನಿರ್ಮಾಣ ಮಾಡುವುದು ಮಹತ್ವದ ಕಾರ್ಯವಾಗಿದೆ ಎಂದು ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಧಾರವಾಡದ ರಾಯಪುರದಲ್ಲಿನ, ಜ್ಞಾನವಿಕಾಸ ತರಬೇತಿ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಾನ ಮುಕ್ತರಿಗೆ ರಾಜ್ಯವ್ಯಾಪಿ ಸ್ವ-ಉದ್ಯೋಗ ತರಬೇತಿ ಕಾರ್ಯಗಾರ ಹಾಗೂ ಸ್ವ ಉದ್ಯೋಗ ನಿರಂತರ ಸಾಧನಾ ಸಮಾವೇಶದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳು ಶ್ರೀ ಮಂಜುನಾಥ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಎರಡು ಪ್ರತ್ಯೇಕ ದಾರಿಗಳು. ಒಂದು ಎಡ ಬದಿಯಲ್ಲಿ ಚಲಿಸಿದರೆ ಇನ್ನೊಂದು ಬಲ ಬದಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎರಡು ಸಂಸ್ಥೆಗಳು ಪ್ರಗತಿಯ ಹಾದಿಯಲ್ಲಿವೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಜ್ಯದ 42 ಲಕ್ಷ ಕುಟುಂಬ ಜೋಡಣೆಯಾಗಿವೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪ್ರಶಂಸಿದೆ. ದೇಶದಲ್ಲಿ 560 ಕ್ಕೂ ಹೆಚ್ಚು ರುಡ್ಸೆಟ್ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
Kshetra Samachara
29/10/2021 09:33 pm