ನವಲಗುಂದ : ಕಿಚ್ಚನ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಅಂದೇ ದೊಡ್ಡ ಹಬ್ಬ ಇದ್ದಂತೆ, ಆದರೆ ಇಂದು ಬಿಡುಗಡೆಗೊಳ್ಳಬೇಕಿದ್ದ ಕಿಚ್ಚ ಸುದೀಪ್ ಅವರು ಅಭಿನಯಿಸಿರುವ ಕೋಟಿಗೊಬ್ಬ-3 ಸಿನಿಮಾ ನಾಳೆ ಬಿಡುಗಡೆ ಆಗುತ್ತಿರುವ ವಿಷಯ ತಿಳಿಯದೆ ಅಭಿಮಾನಿಗಳು ಇಂದೇ ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಆದರೆ ಈಗ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.
ತಾಂತ್ರಿಕ ಕಾರಣಗಳಿಂದ ಚಿತ್ರ ನಾಳೆ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು ಈಗಾಗಲೇ ತಿಳಿಸಿದ್ದಾರೆ. ಇದರಿಂದ ಚಿತ್ರಕ್ಕಾಗಿ ಕಾದು ಕುಳಿತ ಅಭಿಮಾನಿಗಳಿಗೆ ಇದು ಸಾಕಷ್ಟು ನಿರಾಸೆ ಮೂಡಿಸಿದೆ. ಅಭಿಮಾನಿಗಳು ಇಂದು ಬೆಳಿಗ್ಗೆ ನವಲಗುಂದದ ಸಿದ್ದಲಿಂಗೇಶ್ವರ ಚಿತ್ರ ಮಂದಿರದ ಎದುರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಆದರೆ ಈಗ ಚಿತ್ರ ನಾಳೆ ಬಿಡುಗಡೆ ಆಗುವ ಸುದ್ದಿ ತಿಳಿದು, ಅಭಿಮಾನಿಗಳು ಬೇಸರದಿಂದ ಹೊರನಡೆದರು.
Kshetra Samachara
14/10/2021 03:45 pm