ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರ್ ನೆನೆದು ಶ್ರದ್ಧಾಂಜಲಿ ಸಲ್ಲಿಸಿದ ಕುಸುಗಲ್ ಗ್ರಾಮಸ್ಥರು

ಹುಬ್ಬಳ್ಳಿ: ನಟ ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಅಭಿಮಾನಿಗಳು ಮಾರುತಿನಗರದ ಮಾರುತಿ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನ ಸಂತರ್ಪನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ ಕೂಡಾ ಪಾಲ್ಗೊಂಡು, ನಾನು ಸಹ ಪುನೀತ್ ರಾಜಕುಮಾರ ಅವರ ಸಿನಿಮಾ ನೋಡಿದ್ದೇನೆ. ಅವರ ಅಭಿನಯ ಹಾಗೂ ಅವರ ವ್ಯಕ್ತಿತ್ವ ಸಹಾಯ ಮಾಡುವ ಗುಣ ಎಂತವರನ್ನು ಮುಗ್ದರನ್ನಾಗಿ ಮಾಡುತ್ತದೆ. ಅವರ ಮುಖದಲ್ಲಿನ ಮಂದಹಾಸದ ನಗು ಇನ್ನೂ ಮನಸ್ಸಿಂದ ಮಾಸಿಲ್ಲಾ ಎಂದು ಅಭಿಮಾನಿ, ಅಲ್ಲದೇ ಪುನೀತ್ ರಾಜಕುಮಾರ ಅವರನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಪುನೀತ್ ಅಭಿಮಾನಿಗಳಾದ ಹೆಮರೆಡ್ಡಿ ಕುಸುಗಲ್, ಮುದುಕಪ್ಪ (ಸಾಕಪ್ಪ) ಕುಂದಗೋಳ, ರಾಜೇಸಾಬ, ನಜೀರಸಾಬ, ಫಕ್ರುಸಾಬ, ಶಿವರೆಡ್ಡಿ, ಶರೀಫ್, ಶಂಭು ಸಂಕರೆಡ್ಡಿ, ಮಹೇಶ, ಶಿವಾನಂದ, ಗ್ರಾಪಂ ಸದಸ್ಯರಾದ ಮಗತವ್ವ ಫಿರಕಾನವರ, ರಾಜು ಸಂಕರೆಡ್ಡಿ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಇದ್ದರು.

Edited By : Nagesh Gaonkar
Kshetra Samachara

Kshetra Samachara

06/11/2021 09:26 pm

Cinque Terre

25.41 K

Cinque Terre

0

ಸಂಬಂಧಿತ ಸುದ್ದಿ