ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪ್ಪು ಹಾಡುಗಳೇ ಇವರಿಗೆ ಜೀವನಾಧಾರ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಕನ್ನಡ ಚಿತ್ರರಂಗದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲವಾಗಿ 15 ದಿನಗಳು ಕಳೆದಿವೆ. ಆದರೆ, ಅವರ ನೆನಪುಗಳು, ಚಲನಚಿತ್ರಗಳು, ಹಾಡುಗಳು ಸೇರಿದಂತೆ ಅವರು ಮಾಡಿದ ಕಾರ್ಯಗಳು ಮಾತ್ರ ಜನಮಾನಸದಿಂದ ಎಂದಿಗೂ ದೂರ ಸರಿಯಲಾರವು. ಅಪ್ಪು ಎಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಪುನೀತ್‌ ರಾಜಕುಮಾರ ಸಾವಿರಾರು ಅನಾಥರ, ಅಂಗವಿಕಲರ ಹಾಗೂ ಬಡವರ ಬಾಳಿಗೆ ಬೆಳಕಾಗಿದ್ದವರು.

ಹೀಗೆ ಪುನೀತ್‌ ರಾಜಕುಮಾರ್ ಅವರ ನಟನೆಯ ಚಲನಚಿತ್ರ ಗೀತೆಗಳನ್ನು ಹಾಡುತ್ತಿರುವ ಅಂಗವಿಕಲ ಕಲಾವಿದರ ಹೆಸರು ದಾದಾಫೀರ್ ಹಾಗೂ ಇಬ್ರಾಹಿಂಸಾಬ್ ಸವಡಿ. ಇವರು ಮೂಲತಃ ಗದಗ ಜಿಲ್ಲೆಯ ನರಗುಂದದವರು. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಕ್ಷೇಮ ಸಂಘದ ಸದಸ್ಯರಾದ ಇವರು ರಾಜ್ ಕುಟುಂಬದ ಕಟ್ಟಾ ಅಭಿಮಾನಿಗಳು. ಪುನೀತ್‌ ರಾಜಕುಮಾರ್ ಅವರನ್ನು ಭೇಟಿ ಮಾಡಬೇಕು ಎನ್ನುವ ಇವರ ಕನಸು ಕೊನೆಗೂ ಕನಸಾಗಿಯೇ ಉಳಿದು ಹೋಗಿದೆ. ಪುನೀತ್ ಅವರನ್ನು ಕಳೆದುಕೊಂಡು, ಅವರ ನೆನಪಿಗಾಗಿ ಬಡ ಅಂಗವಿಕಲರ ಸಹಾಯಾರ್ಥ ಹೀಗೆ ಊರೂರು ಸುತ್ತಿ ಪುನೀತ್ ಅವರ ಹಾಡುಗಳನ್ನೇ ಹಾಡುತ್ತ ಸಾರ್ವಜನಿಕರು ಕೊಟ್ಟಷ್ಟು ದೇಣಿಗೆ ಪಡೆಯುತ್ತಿದ್ದಾರೆ.

ಶನಿವಾರ ಧಾರವಾಡಕ್ಕೆ ಬಂದಿದ್ದ ಈ ಅಂಗವಿಕಲ ಕಲಾವಿದರು ಪುನೀತ್ ಅವರ ಸಾಕಷ್ಟು ಹಾಡುಗಳನ್ನು ಅಚ್ಚುಕಟ್ಟಾಗಿ, ಸ್ವರ, ರಾಗಗಳಿಂದ ಹಾಡಿ ಸಾರ್ವಜನಿಕರನ್ನು ರಂಜಿಸಿದ್ದಾರೆ.

ಹೀಗೆ ರೋಡ್ ಆರ್ಕೆಸ್ಟ್ರಾ ಮಾಡಿ ಬಂದ ಹಣವನ್ನು ಬಡ ಅಂಗವಿಕಲರಿಗೆ ಹಾಗೂ ತಾವೂ ಅಂಗವಿಕಲರಾಗಿರುವುದರಿಂದ ತಮ್ಮ ಕುಟುಂಬ ನಿರ್ವಹಣೆಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಪ್ಪು ಹಾಡುಗಳೇ ಇವರಿಗೆ ಬಂಡವಾಳವಾಗಿವೆ.

ಹುಟ್ಟಿ ಬಾರೋ ನಮ್ಮಣ್ಣಾ.. ಕನ್ನಡದ ಯುವರತ್ನಾ.. ಹಾಡನ್ನು ಹಾಡಿದ ದಾದಾಫೀರ್ ಅಲ್ಲಿ ಸೇರಿದ್ದವರ ಕಣ್ಣುಗಳು ಒದ್ದೆಯಾಗುವಂತೆ ಮಾಡಿದರು. ಏನೇ ಆಗಲಿ ಅಪ್ಪು ಬದುಕಿದ್ದಾಗಲೂ ಅನೇಕ ಬಡವರಿಗೆ, ಕಲಾವಿದರಿಗೆ, ಅನಾಥ ಮಕ್ಕಳಿಗೆ ನೆರವಾಗಿದ್ದರು. ಈಗ ಅವರು ತೀರಿಹೋದ ನಂತರವೂ ತಮ್ಮ ಹಾಡುಗಳ ಮೂಲಕ ಇಂತಹ ಅಂಗವಿಕಲರ ಕಲಾವಿದರಿಗೆ ನೆರವಾಗುತ್ತಿರುವುದಂತೂ ಸುಳ್ಳಲ್ಲ.

Edited By : Manjunath H D
Kshetra Samachara

Kshetra Samachara

13/11/2021 06:57 pm

Cinque Terre

35.32 K

Cinque Terre

2

ಸಂಬಂಧಿತ ಸುದ್ದಿ