ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ಅವನೊಬ್ಬ ಪುಟ್ಟ ಬಾಲಕ, ತನ್ನ ಮುಗ್ದ ನಟನೆ ಮೂಲಕ ಕನ್ನಡದ ಬ್ಲಾಕ್ ಬಾಸ್ಟರ್ ಸಿನಿಮಾದವೊಂದರಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿದೆ. ಅಷ್ಟಕ್ಕೂ ಆತ ಯಾರು? ಅವನು ಯಾವ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾನೆ ಅಂತಿರಾ, ಹಾಗಾದರೆ ಈ ಸ್ಟೋರಿ ನೋಡಿ.
ಹೀಗೆ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಪೀಸ್ ಧೂಳು ಎಬ್ಬಿಸಿದ ರಾಕಿಂಗ್ ಸ್ಟಾರ್ ಯಶ್ ಅವರ, ಡೈಲಾಗನ್ನು ಸಲೀಸಾಗಿ ಹೇಳುತ್ತಿರುವ ಈ ಬಾಲಕನ ಹೆಸರು ಅಖಿಲೇಶ್ ಪೈ, ಹುಬ್ಬಳ್ಳಿ ಅಕ್ಷಯ್ ಪಾರ್ಕ್ ನಿವಾಸಿ ರಾಘವೇಂದ್ರ ಪೈ ಅವರು ಮುದ್ದು ಮಗನಾದ ಈತ, ಚಿಕ್ಕ ವಯಸ್ಸಿನಿಂದಲೂ ನಟನೆ ಕಡೆ ಒಲವು ತೋರಿದ್ದ, ತಮ್ಮ ಮಗನನ್ನು ಸಿನಿಮಾ ಪರದೆಯಲ್ಲಿ ನೋಡಬೇಕು ಎಂದುಕೊಂಡಿದ್ದ ಪಾಲಕರಿಗೆ, ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಾಯಕತ್ವದ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದಲ್ಲಿ ಅಖಿಲೇಶ್ ನಿಗೆ ನಟನೆ ಮಾಡಲು ಅವಕಾಶ ಸಿಕ್ಕಿದ್ದು ಕುಟುಂಬಸ್ಥರಲ್ಲಿ ಎಲ್ಲಿಲ್ಲದ ಸಂತಸ ವ್ಯಕ್ತವಾಗುತ್ತಿದೆ...
ಇನ್ನು ಅಖಿಲೇಶ್ ಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯ, ಅವರ ಚಿತ್ರಗಳು ಎಂದರೆ ತುಂಬಾ ಇಷ್ಟ. ಹಾಗಾಗಿ ಅವರನ್ನು ತುಂಬಾ ಹತ್ತಿರದಿಂದ ನೋಡಬೇಕು, ಅವರ ಜೊತೆ ನಟನೆ ಮಾಡಬೇಕೆಂಬ ಮಹದಾಸೆಯಿಂದ ಬೆಂಗಳೂರಿಗೆ, ಕೆಜಿಎಫ್ 2 ನ ಆಡಿಷನ್ ನಲ್ಲಿ ಭಾಗವಹಿಸಿದ ಆತ, ಆಶ್ಚರ್ಯ ಎಂಬಂತೆ ಸಾವಿರಾರು ಜನರ ನಡುವೆ ಆಯ್ಕೆಯಾಗಿ ಎಲ್ಲರ ಹುಬ್ಬೆರುವಂತೆ ಮಾಡಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿಗೆ ಜ್ವಲಂತ ಸಾಕ್ಷಿಯಾಗಿ ಅಖಿಲೇಶ ಮೀನಿನಂತೆ ಚುರುಕು, ಕಡಲ ಅಲೆಗಳಂತೆ ಪುಟಿದೇಳುವ ಗುಣ ಹೊಂದಿರುವುದು ಎಲ್ಲರ ಗಮನ ಸೆಳೆದಿದೆ...
ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲೆ ದೊಡ್ಡ ಸ್ಟಾರ್ ನಟರ ಜೊತೆ ಪರದೆ ಹಂಚಿಕೊಂಡಿರುವ ಅಖಿಲೇಶ್, ಸಾಧನೆಗಳು ಗರಿಗೆದರಿ ಮುಗಿಲೆತ್ತರದಲ್ಲಿ ಹಾರಾಡಲಿ, ಇನ್ನೂ ನೂರಾರು ಮೈಲುಗಲ್ಲುಗಳನ್ನು ಕ್ರಮಿಸಲಿ ಎನ್ನುವುದೇ ಎಲ್ಲರ ಆಶಯ.....!
Kshetra Samachara
28/02/2021 01:40 pm