ಧಾರವಾಡ: ಹುಬ್ಬಳ್ಳಿ,ಧಾರವಾಡ ಮಹಾನಗರಗಳು ಸ್ಮಾರ್ಟ್ ಸಿಟಿಗಳಾಗಿರುವುದರಿಂದ ಪಾಲಿಕೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕಸ ಚೆಲ್ಲುವ ಪಾಯಿಂಟ್‌ಗಳನ್ನು ತೆಗೆದು ಹಾಕಿ ಅಲ್ಲಿ ರಂಗೋಲಿ ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಇದೀಗ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಧಾರವಾಡದ ನವರಸ ಸ್ನೇಹಿತರ ವೇದಿಕೆ ಕಿರುಚಿತ್ರವೊಂದನ್ನು ಮಾಡಿದ್ದು, ಅದನ್ನು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರು ಬುಧವಾರ ಬಿಡುಗಡೆಗೊಳಿಸಿದರು.
ಪೌರ ಕಾರ್ಮಿಕರನ್ನೇ ಬಳಕೆ ಮಾಡಿಕೊಂಡು ಆರು ನಿಮಿಷಗಳ ಕಿರುಚಿತ್ರವನ್ನು ಮಾಡಲಾಗಿದ್ದು, ಈ ಕಿರುಚಿತ್ರ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಿದೆ. ಪೌರ ಕಾರ್ಮಿಕರನ್ನೇ ಬಳಕೆ ಮಾಡಿಕೊಂಡು ಈ ಕಿರುಚಿತ್ರ ನಿರ್ಮಾಣ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ತಿಳಿಸಿದರು.
ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ ಅವರು ಈ ಕಿರುಚಿತ್ರ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಿದ್ದು, ಜನರಿಗೆ ಈ ಚಿತ್ರ ಸ್ವಚ್ಛತೆ ಬಗ್ಗೆ ಒಳ್ಳೆಯ ಸಂದೇಶ ರವಾನಿಸಲಿದೆ.
Kshetra Samachara
20/07/2022 09:51 pm