ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ : ಕೊರೊನಾ ಭಯ ಇನ್ನು ಜನರನ್ನು ಕಾಡುತ್ತಿದೆ. ಲಾಕ್ ಡೌನ್ ಸಡಿಲಿಕೆಯ ನಂತರವು ಜನರು ಸಾರ್ವಜನಿಕವಾಗಿ ಓಡಾಡಲು, ಸಾಮೂಹಿಕ ಸಾರಿಗೆ ಬಳಸಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ಸುರಕ್ಷತೆ, ಹಣ ಉಳಿತಾಯಕ್ಕೆ ಜನರು ಮುಂದಾಗಿದ್ದು, ತಮ್ಮ ಅನುಕೂಲಕ್ಕೆ ಬೇಕಾಗಿರುವಂತೆ ಸೆಕೆಂಡ್ ಹ್ಯಾಂಡ್ ಕಾರುಗಳತ್ತ ಮಾರು ಹೋಗುತ್ತಿದ್ದಾರೆ.....
ಹೀಗೆ ಜನರು ಗುಂಪು ಗುಂಪಾಗಿ ನೋಡುತ್ತಾ, ವ್ಯಾಪಾರ ಮಾಡುತ್ತಿರುವುದು ಕಾರ್ ಮೇಳದಲ್ಲಿ. 1ರಿಂದ 5 ಲಕ್ಷ ರೂ. ವರೆಗಿನ ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಜೋರಾಗಿದ್ದು, ಹೊಸ ಕಾರುಗಳನ್ನು ಖರೀದಿ ಮಾಡುವ ಮನಸ್ಸಿದ್ದ ಗ್ರಾಹಕರು ಕೂಡ, ಮಿತವ್ಯಯ ದೃಷ್ಟಿಯಿಂದ ತಮ್ಮ ಆರ್ಥಿಕತೆಗೆ ಹೊಂದುವಂತೆ ಹಳೆ ಕಾರುಗಳನ್ನು ಖರೀದಿ ಮಾಡುತ್ತಿದ್ದಾರೆ. ಕೊರೊನಾ ಪೂರ್ವದಲ್ಲಿ ಪ್ರತಿ ತಿಂಗಳು 10ರಿಂದ 15 ಕಾರುಗಳು ಮಾತ್ರ ಮಾರಾಟವಾಗುತ್ತಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಬಳಿಕ 25ರಿಂದ 30 ಕಾರುಗಳು ಮಾರಾಟವಾಗುತ್ತಿವೆ.
ಅದರಲ್ಲೂ ಐಟಿಬಿಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಅವರು ಕಾರು ಮಾರಾಟಗಾರರ ಬಳಿ ತಮ್ಮ ಕಾರುಗಳನ್ನು ಮಾರಾಟಕ್ಕೆ ಬಿಡುತ್ತಿದ್ದಾರೆ. ಕೊರೊನಾ ಪೂರ್ವಕ್ಕಿಂತ ಕೊರೊನಾ ನಂತರದ ದಿನಗಳಲ್ಲಿ ಅನ್ ಲಾಕ್ ಆದ ಮೇಲೆ ಮೂರು ಪಟ್ಟು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಜನರು ಆಗಮಿಸುತ್ತಿದ್ದಾರೆ...
Kshetra Samachara
17/10/2020 05:40 pm