ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೃಷಿ ಅಭಿವೃದ್ಧಿಗೆ ದೇಶಪಾಂಡೆ ಫೌಂಡೇಶನ್ ಫಾರ್ಮರ್ ಫುಡ್ ಪ್ರೊಡ್ಯೂಸರ್ ಘಟಕ ಸ್ಥಾಪನೆ

ನವಲಗುಂದ: ಸಾಮಾಜಿಕ ಕಾರ್ಯದ ಮೂಲಕ ಸಾಕಷ್ಟು ಹೆಸರು ಮಾಡಿರುವ ದೇಶಪಾಂಡೆ ಫೌಂಡೇಶನ್ ಈಗ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ರೈತರ ಕೃಷಿ ಭೂಮಿಗೆ ಕೃಷಿ ಹೊಂಡ ನಿರ್ಮಾಣ ಮಾತ್ರವಲ್ಲದೇ ಈಗ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ನವಲಗುಂದದಲ್ಲಿ ಕಲ್ಲೇಶ್ವರ ಫಾರ್ಮರ್ ಫುಡ್ ಪ್ರೊಡ್ಯೂಸರ್ ಕಂಪನಿ ಸ್ಥಾಪನೆ ಮಾಡುವ ಮೂಲಕ ಕೃಷಿಗೆ ಹಾಗೂ ಕೃಷಿ ಸಮುದಾಯಕ್ಕೆ ಬೇಕಾದ ಉಪಕರಣಗಳನ್ನು ಒದಗಿಸಲು ಮುಂದಾಗಿದೆ.

ನವಲಗುಂದದಲ್ಲಿ ಅಣ್ಣಿಗೇರಿ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳಲ್ಲಿ ಸ್ಥಾಪನೆ ಮಾಡಿರುವ ಈ ಘಟಕ ಸಾಕಷ್ಟು ರೈತರಿಗೆ ವರದಾನವಾಗಿದೆ. ಬೆಳೆಯ ಬಗ್ಗೆ ತಿಳುವಳಿಕೆ, ಗೊಬ್ಬರ ಹಾಗೂ ಬೀಜಗಳ ಸಮರ್ಪಕ ಬಳಕೆ ಹೀಗೆ ಹತ್ತು ಹಲವು ಆಯಾಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಹಾಗಿದ್ದರೇ ಇಲ್ಲಿನ ಕಾರ್ಯವೈಖರಿಯನ್ನೊಮ್ಮೆ ನೋಡಿ...

ಹೀಗೆ ಹತ್ತು ಹಲವಾರು ಕೃಷಿ ಉಪಯುಕ್ತ ಕಾರ್ಯಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿರುವಂತೆ ಮಾಡಿರುವ ದೇಶಪಾಂಡೆ ಫೌಂಡೇಶನ್ ಮುಂಬರುವ ದಿನಗಳಲ್ಲಿ ಓಪನ್ ಮಾರುಕಟ್ಟೆ ವ್ಯವಸ್ಥೆ ಕೂಡ ಕಲ್ಪಿಸಲು ಮುಂದಾಗಿದೆ. ಇಂತಹ ಮಹತ್ವ ಪೂರ್ಣ ಯೋಜನೆ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗುವುದಂತೂ ಖಂಡಿತಾ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/08/2022 05:33 pm

Cinque Terre

136.91 K

Cinque Terre

0

ಸಂಬಂಧಿತ ಸುದ್ದಿ