ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಹೊನ್ನ ಬೆಳೆದಾನ ಬಸಾಪೂರ ಗ್ರಾಮದ ಭರಮಪ್ಪ; ಜನ ಅಂತಾರ ಹೌದಾ...ಹೌದಪ್ಪ !

ನವಲಗುಂದ: ಕಲಿತಿದ್ದು ನಾಲ್ಕನೇ ತರಗತಿ ಆದರೂ ನಾಲ್ಕು ಲಕ್ಷ ದುಡಿತಾನೆ ಈ ಅನ್ನದಾತ. ದುಡಿಮೆಯ ನಂಬಿದ ರೈತನ ಬದುಕು ನೆಮ್ಮದಿಯ ನೆಲೆಯಾಗಿದೆ. ದೇಶಪಾಂಡೆ ಫೌಂಡೇಶನ್ ನೆರವಿನಿಂದ ಈಗ ನಿಟ್ಟುಸಿರು ಬಿಟ್ಟು ಖುಷಿಯ ಬದುಕನ್ನು ಕಟ್ಟಿಕೊಂಡಿದ್ದಾನೆ. ಹೆಮ್ಮೆಯ ತವರಿನಲ್ಲಿ ನೆಮ್ಮದಿ ಕುಟುಂಬದ ಜೊತೆಗೆ ಕೃಷಿಯ ಕಾಯಕದಲ್ಲಿ ತೊಡಗಿದ್ದಾನೆ.

ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಾಪೂರ ಗ್ರಾಮದ ರೈತ ಭರಮಪ್ಪ ತಹಶೀಲ್ದಾರ ತಮ್ಮ 5 ಎಕರೆ 24 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100×100 ಅಳತೆಯ ಕೃಷಿ ಹೊಂಡ ತೆಗೆಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾನೆ. ಹಾಗಿದ್ದರೆ ರೈತನ ಸಾಧನೆ ಬಗ್ಗೆ ರೈತನೇ ಏನು ಹೇಳ್ತಾರೆ ಕೇಳಿ...

ಕೃಷಿಯಲ್ಲಿ ಅಧುನಿಕತೆಯನ್ನು ಕಂಡುಕೊಂಡ ರೈತ ಲಕ್ಷ ಲಕ್ಷ ಆದಾಯದ ಜೊತೆಗೆ ಹೆಸರು, ಬಿಟ್ಟಿ ಹತ್ತಿ, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆ ಬೆಳೆದು ಭೇಷ್ ಎನಿಸಿಕೊಂಡಿದ್ದಾನೆ. 50,000ದ ಆದಾಯಕ್ಕೆ ಹರಸಾಹಸ ಮಾಡುತ್ತಿದ್ದ ರೈತ ಈಗ 4 ಲಕ್ಷ ಸಂಪಾದನೆ ಮಾಡುತ್ತಿದ್ದಾನೆ.

Edited By : Shivu K
Kshetra Samachara

Kshetra Samachara

24/08/2022 03:09 pm

Cinque Terre

68.23 K

Cinque Terre

2

ಸಂಬಂಧಿತ ಸುದ್ದಿ