ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶಾಲೆ ಬಿಟ್ಟು ಕೃಷಿಗೆ ನಿಂತ ಬಸಪ್ಪ; ಈತನಿಗೆ ಸರಿಸಾಟಿ ಯಾರಪ್ಪ!?

ನವಲಗುಂದ: "ಕೈ ಕೆಸರಾದರೆ ಬಾಯಿ ಮೊಸರು" ಗಾದೆ ಮಾತು ಅಕ್ಷರಶಃ ಸತ್ಯ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ಯುವಕ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರೂ ಬದುಕನ್ನು ಅರ್ಥ ಮಾಡಿಕೊಂಡು ಮಾದರಿಯಾಗಿದ್ದಾನೆ. ಈತನ ಬದುಕಿನಲ್ಲಿ ಹಸಿರನ್ನು ಉಸಿರಾಗಿಸಿದ್ದು ಮಾತ್ರ ದೇಶಪಾಂಡೆ ಫೌಂಡೇಶನ್.

"ದುಡಿಮೆಯ ನಂಬಿ ಬದುಕು... ಅದರಲ್ಲಿ ದೇವರ ಹುಡುಕು" ಎಂಬ ಮಾತಿನಂತೆ ಕೃಷಿಕನ ಬದುಕಿನಲ್ಲಿ ಹೊಸ ಸಂಚಲನ ಸೃಷ್ಟಿಸಿ ಅನ್ನದಾತನ ಬದುಕಿಗೆ ಆಸರೆಯಾಗಬೇಕು ಎಂದುಕೊಂಡ ದೇಶಪಾಂಡೆ ಫೌಂಡೇಶನ್, ರೈತನಿಗೆ ನೆರವಾಗುವಂತೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಟ್ಟಿದೆ.

ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಾಪೂರ ಗ್ರಾಮದ ಯುವ ಕೃಷಿಕನ ಬದುಕಿನಲ್ಲಿ ದೇಶಪಾಂಡೆ ಫೌಂಡೇಶನ್ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಬಸಪ್ಪ ತೊರವಿ ಎಂಬ ಯುವಕ ತನ್ನ ಓದನ್ನು ಅರ್ಧಕ್ಕೆ ಬಿಟ್ಟು ಬದುಕನ್ನು ಅರ್ಥ ಮಾಡಿಕೊಂಡಿದ್ದು, ದೇಶಪಾಂಡೆ ಫೌಂಡೇಶನ್ ನೆರವಿನೊಂದಿಗೆ ಈಗ ಕೃಷಿ ಕಾರ್ಯದಲ್ಲಿ ಯಶಸ್ವಿಯಾಗಿದ್ದಾನೆ.

ತನ್ನ 2 ಎಕರೆ ಹೊಲದಲ್ಲಿ 100×100 ಅಳತೆಯ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದು, ಕಿರಿಯ ವಯಸ್ಸಿನಲ್ಲೇ ಸಾಧಕ ಕೃಷಿಕನಾಗಿ ಹೊರ ಹೊಮ್ಮಿದ್ದಾನೆ. ಹತ್ತನೇ ತರಗತಿಗೆ ಓದುವುದನ್ನು ನಿಲ್ಲಿಸಿದ್ದ ಬಸಪ್ಪ, ಯಾವುದೇ ಕಾಲೇಜಿನ ಮೆಟ್ಟಿಲು ಹತ್ತಲು ಕೂಡ ಇಷ್ಟಪಡಲಿಲ್ಲ. ಆದರೆ, ಆತ ಹಿಡಿದಿದ್ದು ಮಾತ್ರ ಕೃಷಿ ಕಾರ್ಯ. ಈ ಕಾಯಕಕ್ಕೆ ಶ್ರೀರಕ್ಷೆ ಎಂಬಂತೆ ದೇಶಪಾಂಡೆ ಫೌಂಡೇಶನ್ ಸಹಯೋಗದೊಂದಿಗೆ ತನ್ನ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಿದ್ದು, ಈಗ ಭರಪೂರ ಆದಾಯದ ಜೊತೆಗೆ ಬಾಳು ಹಸನಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/08/2022 06:11 pm

Cinque Terre

144.59 K

Cinque Terre

0

ಸಂಬಂಧಿತ ಸುದ್ದಿ