ಅಳ್ನಾವರ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆಗಳೆಲ್ಲಾ ಹಾನಿಗೀಡಾಗಿವೆ.ಇತ್ತೀಚಿಗೆ ಸುರಿದ ಮಳೆಯಿಂದಾಗಿ ರೈತರು ಬೆಳೆದ ಭತ್ತ, ಗೋವಿನಜೋಳ,ಹತ್ತಿ ಇನ್ನಿತರೆ ಬೆಳೆಗಳೆಲ್ಲಾ ಮಳೆಗೆ ಸಿಕ್ಕಿ ಸಂಪೂರ್ಣ ನೆಲಕಚ್ಚಿವೆ.
ಇದಕ್ಕೆ ಸಂಬಂಧ ಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಬೆಳೆಗಳ ಸಮೀಕ್ಷೆ ಮಾಡಬೇಕು,ಸ್ಥಳ ಪರಿಶೀಲನೆ ನಡೆಸಿ,ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಾಸಕ ಸಿ ಎಂ.ನಿಂಬಣ್ಣವರ ಪಬ್ಲಿಕ್ ನೆಕ್ಸ್ಟ್ ಸುದ್ದಿ ವಾಹಿನಿ ಮೂಲಕ ತಿಳಿಸಿದರು.
ಕೆಲವು ವರ್ಷಗಳಿಂದ ರೈತರ ಬೆಳೆ ಹಾನಿ ಯಾದರು ಪರಿಹಾರ ಮಾತ್ರ ಸಿಕ್ಕಿಲ್ಲ.ಒಂದು ವೇಳೆ ಪರಿಹಾರ ಸಿಕ್ಕರು ಬೆರಳಣಿಕೆಯಷ್ಟು ರೈತರಿಗೆ ಮಾತ್ರ ದೊರೆತಿದೆ.ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಬೆಳೆಹಾನಿ ಪರಿಶೀಲಿಸಿ ರೈತರಿಗೆ ಪರಿಹಾರ ದೊರಕಿಸಿ ಕೊಡುತ್ತಾರಾ ಕಾದು ನೋಡಬೇಕಿದೆ.
Kshetra Samachara
20/08/2022 02:01 pm