ನವಲಗುಂದ: ಜಮೀನು ಕಡಿಮೆ ಇದೆಯಾ ? ತೋಟಗಾರಿಕೆ ಬೆಳೆ ಕೈಗೊಳ್ಳಿ, ಜಾಸ್ತಿ ಇದೆಯಾ ? ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆ ಎರಡರ ಜೊತೆ ಹೂಗಳನ್ನು ಬೆಳೆಯಿರಿ. ಬೆಳೆಗಳಿಗೆ ನೀರಿನ ಚಿಂತೆ ಮರೆತು ಕೃಷಿಹೊಂಡದ ಲಾಭ ಪಡೆಯಿರಿ.
ಎಸ್... ಹೀಗೆ ತಮ್ಮ ಕೃಷಿಹೊಂಡದ ಸಾಧನೆಯ ಅನುಭವ ಹಂಚಿಕೊಂಡವರೇ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಅನುಭವಿ ರೈತ ಮಹಾಂತಗೌಡ ಹೊಸಗೌಡರ, ಇಂದಿನ ದೇಶ್ ಕೃಷಿಯ ನಾಯಕ.
ತಮ್ಮ 5 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಮಹಾಂತಗೌಡ್ರು ತೋಟಗಾರಿಕೆ ತರಕಾರಿ, ಸೊಪ್ಪು, ಹಣ್ಣು, ಹೂಗಳ ಜೊತೆ ಬೇಸಾಯದ ಮೂಲ ವಾಣಿಜ್ಯ ಬೆಳೆಗಳಾದ ಹತ್ತಿ, ಈರುಳ್ಳಿ, ಹೆಸರು, ಶೇಂಗಾ ಜೋಳ, ಕಡಲೆ, ಬೆಳೆಗಳಿಗೂ ಪ್ರಾಶಸ್ತ್ಯ ನೀಡಿ ವಾರ್ಷಿಕ 4 ಲಕ್ಷ ಆದಾಯ ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಬಿರುಬಿಸಿಲಿನಲ್ಲಿ ದುಡಿಯುವ ರೈತರ ಬೆಳೆಗಳಿಗೆ ಕೃಷಿಹೊಂಡದಿಂದ ಪೂರಕವಾದ ಜಲಧಾರೆ ಹರಿಸಿ, ಕೃಷಿಗೆ ಬೇಕಾದ ಕೀಟನಾಶಕ ಹಾಗೂ ಉಪಯುಕ್ತ ಬೆಳೆಗಳ ಮಾಹಿತಿ ಹಂಚಿ, ಕೃಷಿಗೆ ಕಳೆ ತಂದ ಸಂಜೀವಿನಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/06/2022 09:17 pm