ನವಲಗುಂದ : ಜಗತ್ತು ಆಧುನಿಕತೆಯತ್ತ ಓಡಿದತ್ತ ಒಂದಿಲ್ಲೊಂದು ಅವಿಷ್ಕಾರ ನಡೆಯುತ್ತಲೇ ಇವೆ, ಆದ್ರೇ ಮಣ್ಣಿಲ್ಲದೆ ಅನ್ನ ಬೆಳೆಯುವ ಆವಿಷ್ಕಾರ ಅಸಾಧ್ಯದ ಮಾತು ಅಂತಹ ಅಸಾಧ್ಯದ ಬದುಕನ್ನೇ ಪ್ರೀತಿಸಿದವರೇ ನಮ್ಮ ಅನ್ನದಾತರು.
ಅಂತಹ ಅನ್ನದಾತರ ಸಾಲಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಹೊಸ ಆದಾಯ ಕಂಡ ಫಕ್ಕೀರಪ್ಪ ನಾಗಪ್ಪ ಖಿತ್ಲಿ ಇವತ್ತಿನ ದೇಶ್ ಕೃಷಿ ಸಾಧಕ ಭೂತಾಯಿ ಆರಾಧಕ.
ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಈ ರೈತ 5 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ತೋಟಗಾರಿಕೆ, ತರಕಾರಿ ಬೆಳೆಗೆ ಮೊದಲ ಪ್ರಾಶಸ್ತ್ಯ ನೀಡಿ ಅದರಂತೆ ವಾಣಿಜ್ಯ ಬೆಳೆಯನ್ನು ಬೆಳೆದು ವಾರ್ಷಿಕ 4 ಲಕ್ಷ ಆದಾಯ ಕಂಡವರು.
ಒಣ ಬೇಸಾಯದ ಮಾರ್ಗದಲ್ಲಿ ಕೈಗೊಳ್ಳಲಾಗದ ಕೃಷಿ ಸಾಧನೆಗೆ ಕೃಷಿಹೊಂಡ ಪೂರಕವಾಗಿ ಬದನೆ, ಟೊಮೆಟೊ, ಸಂಪಿಗೆ, ಮೆಣಸಿನಕಾಯಿ ಬೆಳೆ ಜೊತೆಗೆ ಮೆಳೆ ಅಭಾವದಲ್ಲೂ ವಾಣಿಜ್ಯ ಬೆಳೆಗೆ ಕೃಷಿಹೊಂಡ ಜೀವಧಾರೆ ಹರಿಸಿದೆ.
ಒಟ್ಟಿನಲ್ಲಿ ಕೃಷಿಕನ ಬದುಕಿಗೆ ದೇಶಪಾಂಡೆ ಫೌಂಡೇಶನ್ ಸಂಜೀವಿನಿಯಾಗಿ ಕೃಷಿಹೊಂಡದ ಕೊಡುಗೆ ಜೊತೆ ಬೀಜ ಗೊಬ್ಬರ ಕೀಟನಾಶಕ ಸಹ ವಿತರಿಸುವಲ್ಲಿ ಮುಂಚೂಣಿಯಲ್ಲಿದೆ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/06/2022 04:33 pm