ಕುಂದಗೋಳ : ಕುಂದಗೋಳ ತಾಲೂಕಿನ ರೈತರು ಇನ್ನೇನು ಮುಂಗಾರು ಬಿತ್ತನೆ ಕಾರ್ಯ ಕೈಗೊಳ್ಳಲಿದ್ದು, ಬೀಜ ಗೊಬ್ಬರ ಪಡೆಯಲು ಅರ್ಜಿ ಸಲ್ಲಿಸಲು ರೈತ ಸಂಪರ್ಕ ಕೇಂದ್ರದ ಎಡೆಗೆ ಆಗಮಿಸುತ್ತಿದ್ದಾರೆ.
ಕುಂದಗೋಳ ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ಹಂತದಲ್ಲಿ 3 ಕ್ವಿಂಟಾಲ್ ಉದ್ದು, 34 ಕ್ವಿಂಟಾಲ್ ಹೆಸರು, 3 ಕ್ವಿಂಟಾಲ್ ತೊಗರಿ, 13 ಕ್ವಿಂಟಾಲ್ ಗೋವಿನಜೋಳ, 200 ಕ್ವಿಂಟಾಲ್ ಶೇಂಗಾ ಸೇರಿದಂತೆ 400 ಬ್ಯಾಗ್ ಸ್ಪಿಕ್ ಜಿಪ್ಸಮ್ ಗೊಬ್ಬರ ಸಂಗ್ರಹವಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬೀಜ ವಿತರಣೆ ಕಾರ್ಯ ನಡೆಯಲಿದೆ.
ಈಗಾಗಲೇ ಕುಂದಗೋಳ ತಾಲೂಕಿನ ರೈತರು ತಾಡಪಲ್ ಹಾಗೂ ಬೀಜ ಗೊಬ್ಬರದ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದು ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ್ ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿದ್ದಾರೆ.
ಅದರಂತೆ ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹವಿರುವ ಬೀಜ ಗೊಬ್ಬರ ರೈತರಿಗೆ ಸಾಕಾಗುವುದಿಲ್ಲ, ಹೆಚ್ಚಿನ ಬೀಜ ಪೂರೈಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಾರೆ ಸರ್ಕಾರ ನೀಡಿದಷ್ಟು ಬೀಜ ಗೊಬ್ಬರ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಿದ್ದು, ಮುಂಗಾರು ಬಿತ್ತನೆಗೂ ಮೊದಲು ಹೆಚ್ಚಿನ ಬೀಜ ಗೊಬ್ಬರ ಅನ್ನದಾತನ ಕೈ ತಲುಪಬೇಕಿದೆ.
Kshetra Samachara
22/05/2022 08:11 am