ಧಾರವಾಡ: ಬೇಸಿಗೆ ಮುಗಿದು ಮುಂಗಾರು ಆರಂಭವಾಗುವ ಕಾಲ ಸನ್ನಿಹಿತವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಅಷ್ಟರಲ್ಲಾಗಲೇ ಇದೀಗ ಧಾರವಾಡ ತಾಲೂಕಿನ ದಾಸನಕೊಪ್ಪದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ.
ಹೌದು. ದಾಸನಕೊಪ್ಪ ಗ್ರಾಮದ ಕೆಲ ರೈತರು ಇದೀಗ ಮುಂಗಾರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಮುಂಗಾರು ಪ್ರವೇಶಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ರೈತರು ಭೂಮಿಗೆ ಶೇಂಗಾ ಬೀಜ ಬಿತ್ತಿದ್ದಾರೆ.
ನಿನ್ನೆಯಿಂದ ಬಿತ್ತನೆ ಕಾರ್ಯ ಆರಂಭಿಸಿರುವ ರೈತರು, ಮುಂಗಾರು ಹಂಗಾಮಿನ ಬೆಳೆಯಾದ ಶೇಂಗಾ ಬೀಜವನ್ನು ಬಿತ್ತುವ ಮೂಲಕ ಮುಂಗಾರು ಕೃಷಿಯ ಮೊದಲ ಹೆಜ್ಜೆ ಇಟ್ಟಿದ್ದಾರೆ.
Kshetra Samachara
09/05/2022 12:51 pm