ಅಣ್ಣಿಗೇರಿ: ಕೃಷಿ ಮಾರುಕಟ್ಟೆಗಳಲ್ಲಿ ಸದ್ಯ ಕಡಲೆ ಖರೀದಿ ಶುರುವಾಗಿದೆ. ಟ್ರ್ಯಾಕ್ಟರ್‌ಗಳಲ್ಲಿ ಕಡಲೆ ಹೇರಿಕೊಂಡು ಬಂದ ರೈತರು ಮಾರಾಟಕ್ಕಾಗಿ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಈಗಾಗಲೇ ಬೆಂಬಲ ಬೆಲೆ ಯೋಜನೆಯಲ್ಲಿ ಪ್ರಾರಂಭವಾದ ಕಡಲೆ ಖರೀದಿ ಕೇಂದ್ರಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮದ ರೈತರು ಸರ್ಕಾರದ ಬೆಲೆಯಂತೆ FAQ ಗುಣಮಟ್ಟದ ಕಡಲೆಯನ್ನು ಪ್ರತಿ ಕ್ವಿಂಟಲ್‌ಗೆ 5,230ರಂತೆ ಸರ್ಕಾರ ಖರೀದಿ ಮಾಡುತ್ತಿದೆ.
ಆದರೆ ಪಟ್ಟಣದಲ್ಲಿ ಕಡಲೆ ಖರೀದಿ ಕೇಂದ್ರ ಕಾರ್ಯಾರಂಭ ಮಾಡುವಲ್ಲಿ ವಿಳಂಬವಾಗಿದ್ದರಿಂದ ರೈತರು ಹಣದ ಅಡಚಣೆ ಇದ್ದಾಗ ತಮ್ಮ ಕಡಲೆಕಾಳುಗಳನ್ನು ದಲ್ಲಾಳಿಗಳ ಮುಖಾಂತರ ಮಾರಾಟ ಮಾಡಿದ್ದಾರೆ, ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ಕೆಲ ರೈತರು,ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ನಂದೀಶ್, ಪಬ್ಲಿಕ್ ನೆಕ್ಸ್ಟ್, ಅಣ್ಣಿಗೇರಿ
Kshetra Samachara
09/03/2022 07:17 pm