ಕಾಡು ಜನ ಹೆಚ್ಚಾಗಿ ಗೆಡ್ಡೆ, ಗೆಣಸುಗಳನ್ನೇ ಸೇವಿಸುತ್ತಿದ್ದರು. ಹೀಗಾಗಿಯೇ ಅವರು ದೀರ್ಘಾಯುಷಿಗಳಾಗಿರುತ್ತಿದ್ದರು ಎಂಬ ಮಾತಿದೆ. ಈಗಿನ ಯುವ ಪೀಳಿಗೆಗೆ ಗೆಡ್ಡೆ, ಗೆಣಸುಗಳ ಬಗ್ಗೆ ಮಾಹಿತಿಯೇ ಇಲ್ಲ. ಪ್ರಕೃತಿಯಲ್ಲಿ ಆರೋಗ್ಯಕ್ಕೆ ಪೂರಕವಾದ ಅನೇಕ ರೀತಿಯ ಗೆಡ್ಡೆ, ಗೆಣಸುಗಳಿವೆ. ಅವುಗಳನ್ನು ಜನರಿಗೆ ಪರಿಚಯಿಸುವುದಕ್ಕೋಸ್ಕರವಾಗಿಯೇ ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಮೈಸೂರಿನ ಸಹಜ ಸಮೃದ್ಧ ಸಂಸ್ಥೆಯ ಸಹಯೋಗದಲ್ಲಿ ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ರಾಜ್ಯಮಟ್ಟದ ಗೆಡ್ಡೆ, ಗೆಣಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಇಂದಿನಿಂದ ಆರಂಭಗೊಂಡಿರುವ ಈ ಮೇಳ ನಾಳೆಯೂ ಇರಲಿದೆ. ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಸೇರಿದಂತೆ ಅನೇಕ ಕಡೆಗಳಿಂದ ಗೆಡ್ಡೆ, ಗೆಣಸು ಪ್ರದರ್ಶನಕ್ಕೆ ತರಲಾಗಿದ್ದು, ಧಾರವಾಡಿಗರು ಅದರ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆಯುತ್ತಿದ್ದಾರೆ. ಅಲ್ಲದೇ ಗೆಡ್ಡೆಗಳನ್ನು ಖರೀದಿ ಕೂಡ ಮಾಡುತ್ತಿದ್ದಾರೆ.
ಸುವರ್ಣ ಗೆಡ್ಡೆ, ನೀಲಿ ಕಾಚಲ್, ಉತ್ತರಿ ಗೆಡ್ಡೆ, ಬಿಳಿ ಕಾಚಲ್, ಮಾವಿನಕಾಯಿ ಶುಂಠಿ, ಕುಸುಮ ಗೆಡ್ಡೆ, ಯಾಮ ಗೆಡ್ಡೆ, ಮರಿ ಗೆಣಸು, ನೀಲಿ ಕಾಚಲ್ ಗೆಡ್ಡೆ ಸೇರಿದಂತೆ ಹಸಿರು ಅರಿಶಿನ, ಸಿಹಿ ಕೋಸು, ನಾಗರ ಕೊನೆ ಸೇರಿದಂತೆ ತಹರೇವಾರಿ ದೊಡ್ಡ ದೊಡ್ಡ ಗಾತ್ರದ ಗೆಡ್ಡೆಗಳನ್ನು ಕಂಡ ಧಾರವಾಡಿಗರು ಆಶ್ಚರ್ಯಚಕಿತರಾದರು.
ಗೆಡ್ಡೆ, ಗೆಣಸುಗಳ ವೈಶಿಷ್ಟ್ಯ ಮತ್ತು ಅದರಿಂದಾಗುವ ಉಪಯೋಗಗಳ ಬಗ್ಗೆ ಈ ಭಾಗದ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಭಾನುವಾರ ಕೂಡ ಈ ಪ್ರದರ್ಶನ ನಡೆಯಲಿದೆ.
Kshetra Samachara
26/02/2022 05:35 pm