ಗದಗ : ಕೃಷಿ, ಕೃಷಿ ಕ್ಷೇತ್ರದ ದುಡಿಮೆ ಎಂದ್ರೇ ಈ ರೈತನ ಮಕ್ಕಳಿಗೆ ಹೆಚ್ಚೆಚ್ಚು ಪ್ರೇಮ, ಅದರಲ್ಲೂ ತುಸು ಹೆಚ್ಚು ಜಮೀನು ಕೃಷಿಹೊಂಡ ನೀರಾವರಿ ಆಶ್ರಿತ ಬೇಸಾಯ ಇದ್ರಂತು ಮುಗಿದು ಹೋಯ್ತು ಆ ಕೃಷಿ ಬದುಕಿನ ಸೊಗಸು ಇನ್ನಷ್ಟು ಸುಂದರ.
ಇದೀಗ ಇಂತಹದ್ದೇ ಕೃಷಿ ಬದುಕಿಗೆ ಇಲ್ಲೋಬ್ಬ ರೈತನ ಮಗ ಅವಲಂಬಿತನಾಗಿ ಮೇಟ್ರಿಕ್ ಶಿಕ್ಷಣಕ್ಕೆ ಶಾಲೆ ಬಿಟ್ಟು ಕೃಷಿಹೊಂಡದ ಕೃಷಿಯ ಮೂಲಕ ಹೊಸ ಆದಾಯದ ಮಾರ್ಗದಲ್ಲಿ ಆನಂದದಿಂದ ಇದ್ದಾರೆ.
ಗದಗ ಜಿಲ್ಲೆಯ ಬೆಳಹೊಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಗಾನೂರು ಗ್ರಾಮದ ಸಚಿನ್ ಸಂಗನಗೌಡ ಪಾಟೀಲ್ ಎಂಬುವವರೇ, ತಮ್ಮ 14 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಕಾರದಿಂದ 150/150 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು 24 ನೇ ವಯಸ್ಸಿಗೆ ಶಿಕ್ಷಣ ಬಿಟ್ಟು ಭೂ ತಾಯಿಯ ಮಡಿಲಲ್ಲಿ ಸಂತಸ ಕಂಡವರು.
ಸಂಪೂರ್ಣ 14 ಎಕರೆ ಮುಂಗಾರು ಏಕೈಕ ಬೆಳೆ ಹೆಸರನ್ನು ಬೆಳೆದ ಇವರು, ಉತ್ತಮ ಫಸಲಿನ ಇಳುವರಿ ಕಂಡು ಇದೀಗ ಹಿಂಗಾರು ಕಡಲೆ, ಗೋಧಿ, ಜೋಳದ ಬೆಳೆ ಬೆಳೆದಿದ್ದು ಕಡಲೆಯಂತೂ ಆದಾಯದ ಗರಿ ಹೊತ್ತು ವಿರಮಿಸುತ್ತಿದೆ.
ಇದೇ ಮೊದಲು ಒಣ ಬೇಸಾಯದ ಕೃಷಿ ಕಾಯಕ ಅನುಸರಿಸಿದ್ದ ರೈತ ಸಚಿನ್ ತಂದೆ ಸಂಗನಗೌಡ ಮಗನ ಸಲಹೆ ಹಾಗೂ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಿಸಿಕೊಂಡ ಬಳಿಕ ಪ್ರಗತಿಪರ ರೈತ ಸಾಲಿನಲ್ಲಿ ಇವರು ಸೈ ಎನಿಸಿಕೊಂಡು ವಾರ್ಷಿಕ 5 ಲಕ್ಷ ಆದಾಯಕ್ಕೆ ಸೈ ಎಂದಿದ್ದಾರೆ.
ಉತ್ತಮ ಆದಾಯ, ಕೃಷಿ ಬದುಕು ಅದರಲ್ಲೂ ಶಿಕ್ಷಣ ಬಿಟ್ಟು ಕೃಷಿ ಬದುಕಿನಲ್ಲೇ ಹೊಸ ಕ್ರಾಂತಿ ಮಾಡಲು ಮುಂದಾದ ಯುವ ರೈತ ಸಚಿನ್ ಪಾಟೀಲ್ ಕೃಷಿಹೊಂಡದ ಯಶಸ್ಸಿನ ಕಹಾನಿ ಕೇಳಲು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 8310229401 ನೀವೂ ಕೃಷಿಹೊಂಡ ನಿರ್ಮಿಸಿಲು ಸಲಹೆ ಕೇಳಿ.
Kshetra Samachara
21/01/2022 07:49 pm