ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ಕರುಗಳ ಪ್ರದರ್ಶನ

ಧಾರವಾಡ: ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ವಿಸ್ತರಣಾ ಘಟಕ ಬಲಪಡಿಸುವ ಯೋಜನೆಯಡಿ ಕಲಘಟಗಿ ತಾಲ್ಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ಕರುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಗುಡ್ಡದ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ವಿವಿಧ ಜಾತಿ-ಮೀಶ್ರತಳಿ (ಜರ್ಸಿ ಮತ್ತು ಎಚ್ ಎಫ್) ದೇಶಿ ತಳಿ (ಖಿಲ್ಲಾರ, ಗಿರ್, ಹಳ್ಳಿಕಾರ) ಹಾಗೂ ಸ್ಥಳೀಯ (ವಿಶಿಷ್ಟ ಲಕ್ಷಣಗಳಿಲ್ಲದ) ಜಾನುವಾರುಗಳ ಸುಮಾರು 75 ಹೆಣ್ಣು ಹಾಗೂ ಗಂಡು ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಎಲ್ಲ ಕರುಗಳಿಗೆ ಜಂತುನಾಶಕ ಔಷಧ ಕುಡಿಸಲಾಯಿತು.

ಕರು ಸಾಕಾಣಿಕೆ, ಪ್ರಾಣಿಜನ್ಯ ಮಾನವ ರೋಗ-ರೇಬಿಸ್ ಹಾಗೂ ಜಾನುವಾರು ಹತ್ಯೆ ಪ್ರತಿಭಂದಕ ಕಾಯಿದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಗುಡ್ಡದ ಹುಲಿಕಟ್ಟಿ ಅಧ್ಯಕ್ಷರಾದ ಬಸನಗೌಡ ಪಾಟಿಲ ಹಾಗೂ ಅಥಿತಿ ಸ್ಥಾನವನ್ನು ಗುರುಸಿದ್ದಯ್ಯ, ಹೊಸಮನಿ ಇವರು ವಹಿಸಿದ್ದರು.

ಕಲಘಟಗಿ ಪಶುಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿಗಳು ಡಾ.ಎಸ್.ವಿ. ಸಂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೈನುಗಾರಿಕೆಯಲ್ಲಿ ಕರುಗಳ ಪಾಲನೆಯೇ ಲಾಭಾಂಶ ಹೆಚ್ಚಿಸಲು ಕಾರಣವಾಗಿರುವುದರಿಂದ ಪಶು ಪಾಲಕರು ತಮ್ಮ ಕರುಗಳನ್ನು ಚೆನ್ನಾಗಿ ಪಾಲನೆ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಂಥಹ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕರುಗಳ ಪಾಲನೆ ಬಗ್ಗೆ ವಿವರಿಸುತ್ತಾ, ಕರುಗಳ ಪಾಲನೆ ತಾಯಿಯ ಗರ್ಭದಲ್ಲಿದ್ದಾಗಲೇ ಪ್ರಾರಂಭವಾಗುತ್ತದೆ. ಗರ್ಭಧರಿಸಿದ ತಾಯಿ ಹಾಲು ಕೊಡದೇ ಇರುವಾಗಲೂ ಒಳ್ಳೆಯ ಮೇವು ನೀರಿನ ಜೊತೆಗೆ ಪ್ರತಿದಿನ ಕನಿಷ್ಠ ಒಂದು ಕಿಲೋ ಗ್ರಾಂ ತಿಂಡಿ ಮಿಶ್ರಣವನ್ನು ನೀಡಬೇಕೆಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

20/12/2021 09:37 pm

Cinque Terre

12.65 K

Cinque Terre

0

ಸಂಬಂಧಿತ ಸುದ್ದಿ