ಹುಬ್ಬಳ್ಳಿ: ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ,ರೈತ-ಕೃಷಿ ಕಾರ್ಮಿಕರು ಮೆಣಸಿನಕಾಯಿ ಗಿಡವನ್ನು ಹೊತ್ತುಕೊಂಡು ತಹಶೀಲ್ದಾರ ಕಚೇರಿಯ ಎದುರಿಗೆ ಪ್ರತಿಭಟನೆ ಮಾಡಿದರು.
ರೈತರ ಪ್ರಮುಖ ಬೇಡಿಕೆಗಳಾದ ಬೆಳೆ ಹಾನಿ ಕುರಿತು ಸಮರ್ಪಕ ಸರ್ವೇ ನಡೆಸಬೇಕು,ಬೆಳೆ ನಷಕ್ಕೆ ಸರ್ಕಾರ ಒಂದು ಹೆಕ್ಟೇರಗೆ ಮಳೆಯಾಧಾರಿತ 6,800 ನೀರಾವರಿ ಬೆಳೆಗೆ 13,500 ಹಾಗೂ ತೋಟಗಾರಿಕೆ ಬೆಳೆಗೆ 18,000 ನೀಡಿದೆ.
ಆದರೆ ಇದ್ಯಾವದಕ್ಕೂ ಸಾಲದು. ಆದ್ದರಿಂದ ಸರ್ಕಾರ ಈ ಪರಿಹಾರದ ಮೂರು ಪಟ್ಟು ಹೆಚ್ಚಳ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Kshetra Samachara
16/12/2021 03:43 pm