ಧಾರವಾಡ: ನಿನ್ನೆ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಬೆಳೆಗಳು ನಾಶವಾಗಿವೆ.
ಧಾರವಾಡ ತಾಲೂಕಿನ ಮುಗದ, ಅಂಬ್ಲಿಕೊಪ್ಪ ಸೇರಿದಂತೆ ಅನೇಕ ಕಡೆಗಳಲ್ಲಿನ ಭತ್ತ, ಕಬ್ಬು, ಜೋಳದ ಬೆಳೆಗಳು ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿವೆ.
ಮಳೆಯಿಂದಾಗಿ ಅಂಬ್ಲಿಕೊಪ್ಪ ಗ್ರಾಮದ ಬಳಿ ಇರುವ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ಪಕ್ಕದಲ್ಲಿರುವ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹೆಚ್ಚೂ ಕಡಿಮೆ ಹಳ್ಳದ ಸುತ್ತಮುತ್ತ ಇರುವ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ಜಲಾವೃತಗೊಂಡಿದ್ದು, ಬೆಳೆದ ಬೆಳೆ ಕೈಗೆ ಬರದೇ ನಾಶವಾಗಿರುವುದರಿಂದ ಅನ್ನದಾತ ಕಣ್ಣೀರು ಹಾಕುವಂತಾಗಿದೆ.
ಕಳೆದ ಮೂರು ವರ್ಷಗಳಿಂದ ಬೆಳೆ ಪರಿಹಾರ ಬರದೇ ಮೊದಲೇ ಕಂಗಾಲಾಗಿದ್ದ ರೈತರಿಗೆ ಇದೀಗ ಹಿಂಗಾರು ಬೆಳೆ ಕೂಡ ಮಳೆಯಿಂದ ನಾಶವಾಗಿದ್ದು ಮತ್ತಷ್ಟು ಚಿಂತೆಗೀಡು ಮಾಡಿದೆ.
Kshetra Samachara
17/11/2021 04:08 pm