ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 35 ಲಕ್ಷ ಆದಾಯಕ್ಕೆ ಮುತ್ತಿಕ್ಕಿದ ಕಪ್ಪು ಭೂಮಿಯ ಅಕ್ಕರೆಯ ಬೆಳೆ ಸಕ್ಕರೆ

ನವಲಗುಂದ : ಕೃಷಿಯಲ್ಲಿ ಹೊಸ ಮಾರ್ಗ ಅನುಸರಿಸಿದ್ರೇ, ಹೊಸ ವಿಧದ ಬೆಳೆ ಬೆಳೆದ್ರೇ, ಕೃಷಿಹೊಂಡದ ಬೇಸಾಯದ ಕಸುಬಿಗೆ ಸೈ ಎಂದ್ರೇ ಅದರಂತೆ ಕಷ್ಟ ಪಟ್ಟು ಮೈ ಬಗ್ಗಿಸಿ ದುಡಿದ್ರೇ ರೈತ ರಾಜನಾಗಬಲ್ಲ ಎಂಬುದನ್ನು ಇಲ್ಲೋಬ್ಬ ರೈತ ತೋರಿಸಿಕೊಟ್ಟಿದ್ದಾನೆ.

ಯಾವಾಗ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಆರಂಭವಾಯ್ತೋ, ಆ ಯೋಜನೆಯ ಮೊದಲು ಸದುಪಯೋಗ ಪಡಿಸಿಕೊಂಡವ್ರು ಮತ್ತು ದೇಶಪಾಂಡೆ ಫೌಂಡೇಶನ್'ಗೆ ಅತ್ಯುತ್ತಮ ಸಹಕಾರ ನೀಡಿದವ್ರು ಈ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಧೀಮಂತ ರೈತ ಪಕ್ಕೀರಗೌಡ ಯಂಡ್ರಾವಿ.

ತಮ್ಮ 40 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು, ಒಣ ಬೇಸಾಯದಲ್ಲಿ ಬೆಳೆಯುತ್ತಿದ್ದ ಕಡಲೆ, ಹೆಸರು, ಗೋಧಿ, ಮೆಣಸಿನಗಿಡಗಳ ಫಲದ ಬದಲಾಗಿ ಎಕ ಬೆಳೆ ಪದ್ಧತಿ ಪ್ರಯೋಗಿಸಿ ಕಪ್ಪು ನೆಲದಲ್ಲಿ ಸಕ್ಕರೆ ಬೆಳೆ ಬೆಳೆದಿದ್ದಾರೆ.

40 ಎಕರೆ ಸಂಪೂರ್ಣ ಜಮೀನಲ್ಲಿ ಕಬ್ಬು ಬೆಳೆದ ಈ ರೈತ ವಾರ್ಷಿಕ 35 ಲಕ್ಷ ರೂಪಾಯಿ ಆದಾಯ ಗಳಿಸಿ, ಕಬ್ಬು ಬೆಳೆಯಲ್ಲೇ ಇತರ ರೈತರಿಗೆ ಮಾರ್ಗದರ್ಶಿಯಾಗಿ ಬೆಳೆ ಬೆಳೆಯುವದರ ಜೊತೆಗೆ ಆದಾಯದ ಮಾರ್ಗ ಸಹ ತೋರಿದ್ದಾರೆ.

ಒಟ್ಟಾರೆ ಒಣ ಬೇಸಾಯದ ಬದುಕಲ್ಲಿ ದುಡಿದಷ್ಟು ಬಂದಷ್ಟು ಎಂದು ನಿರಾಶೆ ಹೊಂದಿದ್ದ ರೈತ ಪಕ್ಕೀರಗೌಡ ಯಂಡ್ರಾವಿ, ಈಗ ಹೊಸ ಹುಮ್ಮಸ್ಸು ಹಾಗೂ ವರ್ಚಸ್ಸು ಎರಡನ್ನು ಅಳಗವಾಡಿಯ ಈ ಕಪ್ಪು ಭೂಮಿಯ ಮಡಿಲಲ್ಲಿ ಗಳಿಸಿ ಗ್ರಾಮದ ಮುಖಂಡರಲ್ಲಿ ಅನುಭವಿ ರೈತರಲ್ಲಿ ಒಬ್ಬರಾಗಿದ್ದಾರೆ.

Edited By : Shivu K
Kshetra Samachara

Kshetra Samachara

28/10/2021 08:33 am

Cinque Terre

60.79 K

Cinque Terre

2

ಸಂಬಂಧಿತ ಸುದ್ದಿ