ನವಲಗುಂದ : ಸಾರ್ಥಕ ಶ್ರಮ, ಆ ಶ್ರಮಕ್ಕೆ ತಕ್ಕ ದುಡಿಮೆ ಇದ್ರೇ ಕೃಷಿ ಭೂಮಿಯಲ್ಲಿ ಉತ್ತಮ ಫಲ ಬೆಳೆಯಬಹುದು ಎಂಬುದನ್ನು ಕೇವಲ ತಮ್ಮ ಎರೆಡು ಎಕರೆ ಹೊಲದಲ್ಲಿ ರೈತ ಕೃಷ್ಣಪ್ಪ ಭೀಮಪ್ಪ ಮಾದರ ತೋರಿಸಿಕೊಟ್ಟು ಕಡಿಮೆ ಜಮೀನಿನಲ್ಲೂ ನಿರೀಕ್ಷೆ ಮೀರಿದ ಆದಾಯ ತೆಗೆದಿದ್ದಾರೆ.
ನಾಲ್ಕನೇ ತರಗತಿ ಶಿಕ್ಷಣ ಪಡೆದು ಆರ್ಥಿಕ ಪರಿಸ್ಥಿತಿ ಸರಿಯಿರದ ಕಾರಣ ಶಾಲೆ ಬಿಟ್ಟ ಇವರು, ಅಂದಿನಿಂದ ಒಣ ಬೇಸಾಯದ ಭೂಮಿಯಲ್ಲಿ ಎಂದು ತೆಗೆಯದ ಆದಾಯವನ್ನು ಕೃಷಿಹೊಂಡ ಆಶ್ರಿತ ನೀರಾವರಿ ಮೂಲಕ ಸಂಪಾದಿಸಿದ್ದಾರೆ.
ತಮ್ಮ 2 ಎಕರೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 70/70 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು ಹೆಸರು ಹತ್ತಿ, ಗೋಧಿ, ಜೋಳ ಮೆಣಸಿನಕಾಯಿ ಬೆಳೆ ಬೆಳೆದು ಈ ಬಾರಿ ಕೇವಲ 2 ಎಕರೆ ಜಮೀನಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಆದಾಯ ಗಳಿಸುವ ವಿಶ್ವಾಸ ಹೊಂದಿದ್ದು ಹೆಸರು ಬೆಳೆ ಈಗಾಗಲೇ 50.000 ರೂಪಾಯಿ ಆದಾಯ ತಂದುಕೊಟ್ಟಿದೆ.
ಕೃಷ್ಣಪ್ಪ ತಮ್ಮ ಮಕ್ಕಳನ್ನು ಸಹ ಕೃಷಿ ಕೆಲಸಕ್ಕೆ ಪ್ರೇರೆಪಿಸಿದ್ದು, ಒಣ ಬೇಸಾಯದ ನೆಲದಲ್ಲಿ ನಷ್ಟದ ಹಾದಿಯಲ್ಲಿದ್ದ ಕೃಷಿ ಬದುಕಿಗೆ ಭಾಗಿರಥೀಯಾಗಿ ರೈತರ ಮಡಿಲು ಸೇರಿದ ಕೃಷಿಹೊಂಡ ಆಶ್ರಿತ ಬೇಸಾಯದ ಕಾಯಕದಲ್ಲಿ ಬೆಳದಿಂಗಳು ಕಂಡು ಹಸನ್ಮುಖಿಯಾಗಿದ್ದಾರೆ.
ಒಟ್ಟಾರೆ ಬಡವರನ್ನು ಬಲ್ಲವರನ್ನಾಗಿ ಮಾಡಿದ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಯೋಜನೆಯನ್ನು ಜನ ದೇವರಂತೆ ಕಾಣುತ್ತಿರುವುದು ಅದರ ಪ್ರತಿಫಲವೇ ಸರಿ.
Kshetra Samachara
24/10/2021 05:25 pm